ಬದಿಯಡ್ಕ: ಅರ್ತಲೆ ಕಲ್ಲಕಟ್ಟ ಶ್ರೀ ರಕ್ತೇಶ್ವರೀ ನಾಗ ಗುಳಿಗ ಸೇವಾಸಮಿತಿಯ ಶ್ರೀ ರಕ್ತೇಶ್ವರಿ, ಗುಳಿಗ ಕ್ಷೇತ್ರದ ಶಿಲಾನ್ಯಾಸ, ನಿಧಿಸಮರ್ಪಣೆ ಹಾಗೂ ವಿನಂತಿ ಪತ್ರ ಬಿಡುಗಡೆ ಸಮಾರಂಭ ಮೇ.5ರಂದು ಶುಕ್ರವಾರ ಬೆಳಗ್ಗೆ 11.30ಕ್ಕೆ ನಡೆಯಲಿದೆ. ಕಾಸರಗೋಡು ತಾಲೂಕು ಮಧೂರು ಗ್ರಾಮದ ಕೊಲ್ಲಂಗಾನ ಸಮೀಪ ಅರ್ತಲ ಎಂಬಲ್ಲಿ ನೆಲೆಯಾಗಿರುವ ಅತಿಪುರಾತನ ಹಾಗೂ ಕಾರಣಿಕವಾಗಿರುವ ಈ ಕ್ಷೇತ್ರದಲ್ಲಿ ಮೇ.5ರಂದು ಬೆಳಗ್ಗೆ 10 ರಿಂದ ಸಭಾ ಕಾರ್ಯಕ್ರಮ ಆರಂಭವಾಗಲಿರುವುದು. ಸೇವಾ ಸಮಿತಿ ಅಧ್ಯಕ್ಷ ಸುಬ್ಬಣ್ಣ ನಾಯ್ಕ್ ಅರ್ತಲೆ ಅಧ್ಯಕ್ಷತೆ ವಹಿಸುವರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ವಿನಂತಿ ಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡುವರು. ಗೌರವ ಅಭ್ಯಾಗತರಾಗಿ ವೇದಮೂರ್ತಿ ಮುಂಡೋಡು ಗಣೇಶ್ ಭಟ್, ವಾಸ್ತುಶಿಲ್ಪಿ ರಮೇಶ್ ಕಾರಂತ, ಸತೀಶ್ ಖಂಡಿಗೆ ಕಲ್ಲಕಟ್ಟ, ಗೌರವಾಧ್ಯಕ್ಷ ಗೋಪಾಲಕೃಷ್ಣ ನಾವಡ ಓಣಿಕುಂಡು, ಮಧೂರು ಗ್ರಾಮಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಪಿ.ಸುರೇಂದ್ರ, ಬಾಬೂಜಿ ಭಟ್, ಡಾ. ನಾಗರಾಜ ಭಟ್, ಡಾ.ಜನಾರ್ಧನ ನಾಯ್ಕ್, ಗೋವಿಂದ ನಾಯ್ಕ್, ಮಾಧವ ಮಾಸ್ತರ್, ಕೃಷ್ಣಪ್ರಸಾದ ಚಿತ್ತಾರಿ ಉಪಸ್ಥಿತರಿರುವರು. ಊರಿನ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಕ್ತಾದಿಗಳು ವೇದಿಕೆಯಲ್ಲಿ ಉಪಸ್ಥಿತರಿರುವರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ರಕ್ತೇಶ್ವರಿ ನಾಗಗುಳಿಗ ಕ್ಷೇತ್ರ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಪ್ರೊ.ಎ. ಶ್ರೀನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.