ಕರಾಚಿ: 500 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲು ಪಾಕಿಸ್ತಾನದ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕರಾಚಿ: 500 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲು ಪಾಕಿಸ್ತಾನದ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕೈದಿಗಳಲ್ಲಿ 5 ವರ್ಷ ಜೈಲು ಶಿಕ್ಷೆ ಪೂರೈಸಿದ 499 ಮೀನುಗಾರರಿದ್ದು, ಹಂತ ಹಂತವಾಗಿ ಇವರನ್ನು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲಿರ್ ಜಿಲ್ಲಾ ಕಾರಾಗೃಹದಿಂದ 200 ಕೈದಿಗಳ ಮೊದಲ ತಂಡ ಬಿಡುಗಡೆಗೊಳಿಸಿ ಲಾಹೋರ್‌ಗೆ ಕಳುಹಿಸಲಾಗುತ್ತದೆ, ಈ ವೇಳೆ ಪ್ರಯಾಣಕ್ಕೆ ಈಧಿ ಪೌಂಡೇಶನ್ ರೈಲಿನ ವ್ಯವಸ್ಥೆ ಮಾಡಿಕೊಡಲಿದೆ. ಲಾಹೋರ್‌ನಿಂದ ವಾಘಾ ಗಡಿಯ ಮೂಲಕ ಭಾರತೀಯ ಅಧಿಕಾರಿಗಳಿಗೆ ಕೈದಿಗಳನ್ನು ಹಸ್ತಾಂತರಿಸಲಾಗುವುದು ಎಂದು 'ಎಆರ್‌ವೈ' ನ್ಯೂಸ್ ವರದಿ ಮಾಡಿದೆ.
ಜೂನ್ 2ರಂದು 200 ಕೈದಿಗಳ ಮತ್ತೊಂದು ತಂಡ ಭಾರತಕ್ಕೆ ವಾಪಸಾದರೆ, ಜುಲೈ 3ರಂದು ಮೂರನೇ ತಂಡ ಹಸ್ತಾಂತರಗೊಳ್ಳಲಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಅರಬ್ಬಿ ಕಡಲ ಗಡಿ ರೇಖೆಯನ್ನು ಸರಿಯಾಗಿ ಗುರುತಿಸದ ಕಾರಣ ಪಾಕಿಸ್ತಾನ ಹಾಗೂ ಭಾರತದ ಮೀನುಗಾರರ ಬಂಧನವಾಗುತ್ತಿದೆ ಎಂದೂ ವರದಿ ತಿಳಿಸಿದೆ.