ಮುಂಬೈ: ಕೈಯಲ್ಲಿ ಮೊಬೈಲ್ ಇದ್ದರೆ ಪ್ರಪಂಚನ್ನೇ ಮರೆತು ಓಡಾಡುವ ಕಾಲವಿದು. ಸಾರ್ವಜನಿಕ ಸ್ಥಳ ಎನ್ನುವುದು ನೋಡದೆ ಮೊಬೈಲ್ನಲ್ಲಿ ಜೋರಾಗಿ ಸೌಂಡ್ ಇಟ್ಟುಕೊಂಡು ಸಾಂಗ್ ಕೇಳುವುದು, ವಿಡಿಯೋ ನೋಡುವ ಅಭ್ಯಾಸ ಇರುವ ಮೊಬೈಲ್ ಪ್ರಿಯರಿಗೆ ಮುಂಬೈನಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ.
ಮುಂಬೈ: ಕೈಯಲ್ಲಿ ಮೊಬೈಲ್ ಇದ್ದರೆ ಪ್ರಪಂಚನ್ನೇ ಮರೆತು ಓಡಾಡುವ ಕಾಲವಿದು. ಸಾರ್ವಜನಿಕ ಸ್ಥಳ ಎನ್ನುವುದು ನೋಡದೆ ಮೊಬೈಲ್ನಲ್ಲಿ ಜೋರಾಗಿ ಸೌಂಡ್ ಇಟ್ಟುಕೊಂಡು ಸಾಂಗ್ ಕೇಳುವುದು, ವಿಡಿಯೋ ನೋಡುವ ಅಭ್ಯಾಸ ಇರುವ ಮೊಬೈಲ್ ಪ್ರಿಯರಿಗೆ ಮುಂಬೈನಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ.
ಬಸ್ಸು, ರೈಲು, ಸಾರ್ವಜನಿಕ ಸ್ಥಳಗಳಲ್ಲಿ ಫೋನ್‌ನಲ್ಲಿ ಜೋರಾಗಿ ಹಾಡುಗಳನ್ನು ಕೇಳುವವರೂ ಇದ್ದಾರೆ. ಫೋನ್‌ನಲ್ಲಿಯೂ ಜೋರಾಗಿ ಮಾತನಾಡುತ್ತಾರೆ. ಅಂತಹವರಿಗಾಗಿಯೇ ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮ ಬಂದಿದ್ದು, ಬಸ್‌ನಲ್ಲಿ ಪ್ರಯಾಣಿಸುವಾಗ ಫೋನ್‌ನಲ್ಲಿ ಜೋರಾಗಿ ಮಾತನಾಡಿದರೆ ಅಥವಾ ಹೆಡ್‌ಫೋನ್ ಇಲ್ಲದೆ ವೀಡಿಯೊಗಳನ್ನು ವೀಕ್ಷಿಸಿದರೆ ನೀವು 5000 ರೂಪಾಯಿ ದಂಡ ತೆರಬೇಕಾಗಬಹುದು. ಅಲ್ಲದೆ, 3 ತಿಂಗಳ ಜೈಲು ಶಿಕ್ಷೆ ವಿಧಿಸಬಹುದು.
ಪ್ರಸ್ತುತ, ಈ ನಿಯಮವನ್ನು BEST ಅಂದರೆ ಬೃಹತ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್ ಜಾರಿಗೊಳಿಸಿದೆ. ಈ ನಿಯಮದ ಅಡಿಯಲ್ಲಿ, ಬಸ್‌ನಲ್ಲಿ ಹೆಡ್‌ಫೋನ್ ಇಲ್ಲದೆ ವೀಡಿಯೊಗಳನ್ನು ವೀಕ್ಷಿಸಲು ನಿರ್ಬಂಧವನ್ನು ವಿಧಿಸಲಾಗಿದೆ ಮತ್ತು ನಿಯಮವನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆಗೆ ಗುರಿಯಾಗಬಹುದು. ಸಹ ಪ್ರಯಾಣಿಕರು, ವೃದ್ಧರು ಪ್ರಯಾಣಿಸುವಾಗ ಜಾಸ್ತಿ ಸೌಂಡ್ ಹಾಕಿ ವೀಡಿಯೋ ನೋಡುತ್ತಾ, ಹಾಡು ಕೇಳುತ್ತಾ ತೊಂದರೆ ಅನುಭವಿಸುವುದನ್ನ ನೋಡುತ್ತೇವೆ. ಆದ್ರೆ, ಈ ಸಮಸ್ಯೆಗೆ ಪರಿಹಾರ ನೀಡಲು ಇದೀಗ ಹೊಸ ನಿಯಮವೊಂದು ಸಿದ್ಧಗೊಂಡಿದೆ. ಇದರ ಪ್ರಕಾರ, ಯಾರಾದ್ರೂ ಬಸ್‌ನಲ್ಲಿ ಪ್ರಯಾಣಿಸುವಾಗ ಜೋರಾಗಿ ಸೌಂಡ್ ಹಾಕಿ ವೀಡಿಯೋ ನೋಡಲು ಪ್ರಾರಂಭಿಸಿದ್ರೆ, ಆ ವ್ಯಕ್ತಿ 5000 ರೂ, ದಂಡವನ್ನ ಪಾವತಿಸಬೇಕಾಗುತ್ತದೆ. ಮೇಲಾಗಿ, 3 ತಿಂಗಳ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ.
ಬೆಸ್ಟ್ ಈ ವಾರದಿಂದಲೇ ಮೊಬೈಲ್ ಫೋನ್‌ಗಳ ಸ್ಪೀಕರ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುವುದನ್ನು ಅಥವಾ ಹಾಡುಗಳನ್ನು ಪ್ಲೇ ಮಾಡುವುದನ್ನು ನಿಷೇಧಿಸಿದೆ. ಈ ಸಂಬಂಧ ಏಪ್ರಿಲ್ 25 ರಂದು ಅಧಿಸೂಚನೆ ಹೊರಡಿಸಲಾಗಿದೆ. ಹೊಸ ನಿಯಮದ ಕುರಿತು ಜಾಗೃತಿ ಮೂಡಿಸಲು ಬಸ್ ಗಳಲ್ಲಿ ನೋಟಿಫಿಕೇಷನ್ ಅಂಟಿಸುವ ಕಾರ್ಯ ಆರಂಭವಾಗಿದೆ. ಮುಂಬೈ ಮತ್ತು ನೆರೆಯ ನಗರಗಳ ಬಸ್ ಪ್ರಯಾಣಿಕರಿಗೆ ಹೊಸ ನಿಯಮ ಅನ್ವಯಿಸುತ್ತದೆ.