ಎಲ್‍ಇಡಿ ಫ್ಲ್ಯಾಷ್ ಲೈಟ್‍ಗಳು ಸರ್ಕಾರಿ ವಾಹನಗಳಲ್ಲಿದ್ದರೂ ದಂಡ ವಿಧಿಸಲಾಗುವುದು: 5 ಸಾವಿರ ದಂಡ ವಿಧಿಸಬೇಕು ಎಂದು ಹೈಕೋರ್ಟ್ ಸೂಚನೆ
ಎರ್ನಾಕುಳಂ: ಕಾನೂನು ಬಾಹಿರವಾಗಿ ಎಲ್‍ಇಡಿ ಫ್ಲ್ಯಾಷ್ ಲೈಟ್‍ಗಳನ್ನು ಅಳವಡಿಸಿಕೊಂಡು ಸಂಚರಿಸುವ ಎಲ್ಲಾ ಸರ್ಕಾರಿ ವಾಹನಗಳ ವಿರುದ್ಧ ಕಠಿಣ ಕ್ರಮಕ್ಕೆ ಹೈಕೋರ್ಟ್ ಆದೇಶಿಸಿದೆ.
ಹೈಕೋರ್ಟ್ ವಿಭಾಗೀಯ ಪೀಠದಿಂದ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ವಾಹನವನ್ನು ಖರೀದಿಸುವಾಗ ಅದರ ಮೇಲೆ ಇರುವ ದೀಪಗಳ ಜೊತೆಗೆ ಅಲಂಕಾರಿಕ ದೀಪಗಳನ್ನು ವಾಹನದಲ್ಲಿ ಅಳವಡಿಸಬಾರದು. ಆದರೆ ಸಚಿವರು ಸೇರಿದಂತೆ ಹಲವು ಸರ್ಕಾರಿ ವಾಹನಗಳು ಕಾನೂನು ಉಲ್ಲಂಘಿಸುತ್ತಿರುವುದನ್ನು ಹೈಕೋರ್ಟ್ ಪತ್ತೆಮಾಡಿದೆ. ಕಾನೂನು ಉಲ್ಲಂಘಿಸುವ ಎಲ್ಲ ಸರ್ಕಾರಿ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಈ ಸಂಬಂಧ ರಾಜ್ಯ ಪೊಲೀಸ್ ಮುಖ್ಯಸ್ಥರು ಹಾಗೂ ಸಾರಿಗೆ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಎಲ್ ಇಡಿ ಫ್ಲ್ಯಾಶ್ ಲೈಟ್ ಅಳವಡಿಸಿದ ವಾಹನಗಳ ಮಾಲೀಕರಿಗೆ 5 ಸಾವಿರ ದಂಡವನ್ನೂ ವಿಧಿಸಲಾಗುತ್ತದೆ. ವಾಹನಗಳ ಮಾಲೀಕರಾಗಿ ಸರಕಾರವೇ ದಂಡ ಪಾವತಿಸಬೇಕಾಗುತ್ತದೆ. ಬೇರೆ ರಾಜ್ಯಗಳ ಸರ್ಕಾರಿ ವಾಹನಗಳು ಎಲ್ ಇಡಿ ಫ್ಲ್ಯಾಶ್ ಲೈಟ್ ಅಳವಡಿಸಿ ರಾಜ್ಯಕ್ಕೆ ಬಂದರೆ ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ದೇಶದ ಮೋಟಾರು ವಾಹನ ಕಾಯ್ದೆಯ ಪ್ರಕಾರ ಯಾವುದೇ ವಾಹನದಲ್ಲಿ ಇಂತಹ ಫ್ಲ್ಯಾಶ್ ಲೈಟ್ ಗಳನ್ನು ಅಳವಡಿಸುವಂತಿಲ್ಲ. ಸರ್ಕಾರಿ ವಾಹನಗಳಲ್ಲದೆ, ಖಾಸಗಿ ವಾಹನಗಳ ಮಾಲೀಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ವಿಭಾಗೀಯ ಪೀಠ ಸೂಚಿಸಿದೆ. ಈ ಹಿಂದೆ ಇಂತಹ ಲೈಟ್ ಅಳವಡಿಸಿದ ವಾಹನಗಳಲ್ಲಿ ಸಚಿವರು ಸಂಚರಿಸುತ್ತಿದ್ದರು. ಬಳಿಕ ಕೇಂದ್ರ ಸರ್ಕಾರ ವಿಐಪಿ ಸಂಸ್ಕøತಿಯ ಭಾಗ ಎಂದು ಪರಿಗಣಿಸಿದ್ದರೂ ಬಳಿಕ ಪ್ರಧಾನಿ ವಾಹನ ಸೇರಿದಂತೆ ಲೈಟ್ ಗಳನ್ನು ತೆಗೆದಿರಿಸಲಾಗಿತ್ತು.