ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ 30ನೇ ವರ್ಷಾಚರಣೆ'ತ್ರಿಂಶತಿ ವರ್ಷಾಚರಣೆ' ಸಂದರ್ಭ ಕರ್ನಾಟಕ ಸಾಹಿತ್ಯ ಪರಿಷತ್‍ನ 109ನೇ ಸಂಸ್ಥಾಪನಾ ವಷಾಚರಣೆ ಕಾರ್ಯಕ್ರಮ ಮೇ 5ರಂದು ಮಧ್ಯಾಹ್ನ 3.30ಕ್ಕೆ ಕಾಸರಗೋಡು ಬ್ಯಾಂಕ್ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಜರುಗಲಿದೆ.
ಕತೆಗಾರ್ತಿ, ಸಮಾಜಸೇವಕಿ ಸ್ನೇಹಲತಾ ದಿವಾಕರ್ ಉದ್ಘಾಟಿಸುವರು. ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸುವರು. ಧರ್ಮತ್ತಡ್ಕ ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್ ಎನ್ ಹಾಗೂ ಕಾಸರಗೋಡು ಸರ್ಕಾರಿ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಆಶಾಲತಾ ಸಿ.ಕೆ ಉಪನ್ಯಾಸ ನೀಡುವರು. ಈ ಸಂದರ್ಭ ಗಣೇಶ್ ಪ್ರಸಾದ್ ಪಾಣೂರು ಹೊರತಂದ ಪಿಎಸ್‍ಸಿ ಗೈಡ್ ಕೃತಿಯನ್ನು ಎಸ್.ವಿ ಭಟ್ ಲೋಕಾರ್ಪಣೆಗೈಯುವರು. ಹಿರಿಯ, ಕಿರಿಯ ಗಾಯಕರಿಂದ ಭಾವ ಗೀತಾಮೃತ ಕಾರ್ಯಕ್ರಮ ನಡೆಯುವುದು.