ಕಾಸರಗೋಡು: ಸಂಕಷ್ಟದಲ್ಲಿರುವ ಖಾಸಗಿ ಬಸ್ ಉದ್ದಿಮೆಯನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಜೂ. 5ರಿಂದ ತಿರುವನಂತಪುರದ ಸೆಕ್ರೆಟೇರಿಯೆಟ್ ಎದುರು ಖಾಸಗಿ ಬಸ್ ಮಾಲಿಕರ ಫೆಡರೇಶನ್ ರಾಜ್ಯಾಧ್ಯಕ್ಷ ಕೆ.ಕೆ ಥಾಮಸ್ ಅವರು ಅನಿಧಿಷ್ಟಕಾಲ ನಿರಾಹಾರ ಸತ್ಯಾಗ್ರಹ ನಡೆಸಲಿರುವುದಾಗಿ ಸಂಘಟನೆ ರಾಜ್ಯ ಸಮಿತಿ ಉಪಾಧ್ಯಕ್ಷ ಶರಣ್ಯ ಮನೋಜ್ ಬುಧವಾರ ಸಉದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದುವರೆಗೆ ಖಾಸಗಿ ಬಸ್ ಮುಷ್ಕರದ ಸಂದರ್ಭ ಬಸ್ ಸಂಚಾರ ಸ್ಥಗಿತಗೊಳಿಸುವ ಮೂಲಕ ಬೇಡಿಕೆ ಈಡೆರಿಕೆಗೆ ಒತ್ತಾಯಿಸಲಾಗುತ್ತಿದ್ದರೆ, ಈ ಬಾರಿ ಬಸ್ ಸಂಚಾರ ಎಂದಿನಂತೆ ಸಂಚರ ನಡೆಸಿಕೊಂಡು, ಮಾಲಿಕರು ಅನಿರ್ಧಿಷ್ಟಾವಧಿ ನಿರಾಹಾರ ಮುಷ್ಕರ ನಡೆಸಲಿದ್ದಾರೆ. ಪ್ರಮುಖ ನಾಲ್ಕು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಯಲಿದೆ. ದೀರ್ಘದೂರ ಸಂಚಾರ ನಡೆಸುವ ಖಾಸಗಿ ಬಸ್‍ಗಳ ಪರವಾನಗಿಯನ್ನು ದೂರಪರಿಮಿತಿಯಿಲ್ಲದೆ ಸಕಾಲಕ್ಕೆ ನವೀಕರಿಸಿ ನೀಡಬೇಕು, 2023 ಮೇ 4ರಂದು ಖಾಸಗಿ ಬಸ್ ಸಂಚಾರದ ವಿರುದ್ಧ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು, ವಿದ್ಯಾರ್ಥಿಗಳ ರಿಯಾಯಿತಿ ಟಿಕೆಟ್ ದರ ಹೆಚ್ಚಿಸುವುದರ ಜತೆಗೆ ಖಾಸಗಿ ಬಸ್‍ಗಳಂತೆ ಕೆಎಸ್ಸಾರ್ಟಿಸಿಯಲ್ಲೂ ಸ್ಪಾಟ್ ಟಿಕೆಟ್ ವ್ಯವಸ್ಥೆ ಏರ್ಪಡಿಸಬೇಕು, ಖಾಸಗಿ ಬಸ್ ಉದ್ದಿಮೆ ಬಗ್ಗೆ ಅಧ್ಯಯನ ನಡೆಸಲು ಪ್ರತ್ಯೇಕ ಆಯೋಗ ರಚಿಸುವಂತೆ ಆಗ್ರಹಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಈ ಹಿಂದೆ 34ಸಾವಿರ ಖಾಸಗಿ ಬಸ್‍ಗಳು ಸಂಚಾರ ನಡೆಸುತ್ತಿದ್ದರೆ, ಇಂದು ಈ ಸಂಖ್ಯೆ ಏಳು ಸಾವಿರಕ್ಕೆ ಕುಸಿದಿದೆ. ಸರ್ಕಾರ ಖಾಸಗಿ ಬಸ್ ಉದ್ದಿಮೆ ಬಗ್ಗೆ ಇದೇ ರೀತಿಯ ಧೋರಣೆ ಮುಂದುವರಿಸಿದಲ್ಲಿ, ಕೆಲವೇ ವರ್ಷಗಳಲ್ಲಿ ಖಾಸಗಿ ಬಸ್‍ಗಳು ಸಂಚಾರದಿಂದ ಸಂಪೂರ್ಣ ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಬದಲಿಯಾಗಿ ಕೆಎಸ್ಸಾರ್ಟಿಸಿ ಬಸ್‍ಗಳು ಈ ಸ್ಥಾನ ತುಂಬುವ ಭರವಸೆಯೂ ಕಾಣುತ್ತಿಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಬಡ ಜನತೆ ಹಾಗೂ ವಿದ್ಯಾರ್ಥಿಗಳು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗಿ ಬರಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ರಾಜ್ಯ ಸಮಿತಿ ಕೋಶಾಧಿಕಾರಿ ಹಂಝ ಎರಿಕುನ್ನನ್, ಜಿಲ್ಲಾಧ್ಯಕ್ಷ ಕೆ.ಗಿರೀಶ್, ಪ್ರಧಾನ ಕಾರ್ಯದರ್ಶಿ ಟಿ.ಲಕ್ಷ್ಮಣನ್, ಕೋಶಾಧಿಕಾರಿ ಪಿ.ಎ.ಮಹಮ್ಮದ್‍ಕುಞÂ, ಎ.ವಿ.ಪ್ರದೀಪ್ ಕುಮಾರ್, ಕೆ.ಶಂಕರ ನಾಯ್ಕ್, ಎಂ.ಹಸೈನಾರ್ ಉಪಸ್ಥಿತರಿದ್ದರು.