HEALTH TIPS

ವಂದೇಭಾರತ: 6 ದಿನ, ಆದಾಯ 2.7 ಕೋಟಿ, 27,000 ಮಂದಿ ಜನರು ಪ್ರಯಾಣ: ಅಂಕಿಅಂಶ ಹೀಗಿದೆ

             ತಿರುವನಂತಪುರಂ: ವಂದೇಭಾರತ್ ರೈಲು 6 ದಿನಗಳಲ್ಲಿ 2.7 ಕೋಟಿ ರೂಪಾಯಿ ಟಿಕೆಟ್ ಆದಾಯ ಗಳಿಸಿದೆ. ಇದು ಏಪ್ರಿಲ್ 28 ರಿಂದ ಮೇ 3 ರವರೆಗಿನ ಅಂಕಿ ಅಂಶವಾಗಿದೆ.

           ಈ ಅವಧಿಯಲ್ಲಿ 31,412 ಬುಕ್ಕಿಂಗ್‍ಗಳು ಬಂದಿವೆ. 27,000 ಜನರು ರೈಲಿನಲ್ಲಿ ಪ್ರಯಾಣಿಸಿರುವÀರು. 1,128 ಆಸನಗಳ ರೈಲಿನ ಎಕ್ಸಿಕ್ಯೂಟಿವ್ ಕ್ಲಾಸ್‍ನಲ್ಲಿ ಪ್ರಯಾಣಿಕರು ಹೆಚ್ಚು ಪ್ರಯಾಣಿಸಿದ್ದಾರೆ. ಮೇ 14ರವರೆಗಿನ ಎಲ್ಲಾ ಟಿಕೆಟ್‍ಗಳನ್ನು ಕಾಯ್ದಿರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

          ರೈಲು ಸೇವೆಗಳು ತಿರುವನಂತಪುರಂ-ಕಾಸರಗೋಡು ಮಾರ್ಗದಲ್ಲಿ ಮತ್ತು ಕಾಸರಗೋಡಿನಿಂದ ತಿರುವನಂತಪುರಕ್ಕೆ ಹಿಂತೆರಳುವ ಸಂಚಾರ ಆಧರಿಸಿ ಈ ಅಂಕಿಅಂಶ ಬೊಟ್ಟುಮಾಡಿದೆ. ಕಾಸರಗೋಡಿನಿಂದ ತಿರುವನಂತಪುರಕ್ಕೆ ಹೆಚ್ಚು ಜನರು ಪ್ರಯಾಣಿಸಿದ್ದು-1.17 ಕೋಟಿ ರೂಪಾಯಿಗಳನ್ನು ಗಳಿಸಲಾಗಿದೆ. ತಿರುವನಂತಪುರಂ-ಕಾಸರಗೋಡು  ಪ್ರಯಾಣಕ್ಕೆ 1.10 ಕೋಟಿ ರೂ.ಆದಾಯ ಲಭಿಸಿದೆ.

           ಕಾಸರಗೋಡಿನಿಂದ ತಿರುವನಂತಪುರಕ್ಕೆ ರೈಲಿನ ಸಂಗ್ರಹ ಹೀಗಿದೆ: ಏಪ್ರಿಲ್ 28-19.5 ಲಕ್ಷ, ಏಪ್ರಿಲ್ 29-20.30 ಲಕ್ಷ, ಏಪ್ರಿಲ್ 30-20.50 ಲಕ್ಷ, ಮೇ 1-20.1 ಲಕ್ಷ, ಮೇ 2- 18.2 ಲಕ್ಷ, ಮೇ 3-18 ಲಕ್ಷ. ರೂ.ಗಳಾಗಿವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries