ಕಾಸರಗೋಡು: ಜಿಲ್ಲಾದ್ಯಂತ ಅಂಗನವಾಡಿ ಮಕ್ಕಳ ಪ್ರವೇಶೋತ್ಸವ ಅದ್ದೂರಿಯಾಗಿ ನೆರವೇರಿತು. ಜಿಲ್ಲೆಯ ಒಟ್ಟು 1348 ಅಂಗನವಾಡಿಗಳಿಗೆ 6445 ಮಕ್ಕಳು ಪ್ರವೇಶೋತ್ಸವದಂದು ಹಾಜರಾಗಿದ್ದರು. ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು, ಪಾಲಕರು, ಸಮಾಜದ ಪ್ರತಿನಿಧಿಗಳು, ಐಸಿಡಿಎಸ್ ಪ್ರತಿನಿಧಿಗಳು ಹಾಗೂ ಸ್ಥಳೀಯರು ಮೆರವಣಿಗೆಯ ಜತೆಗೆ ಮಕ್ಕಳನ್ನು ಸ್ವಾಗತಿಸಿದರು.
ಅಂಗನವಾಡಿಗಳಲ್ಲಿ ಅಳವಡಿಸಲಾಗಿದ್ದ ಭಿತ್ತಿಪತ್ರಗಳಲ್ಲಿ 'ಇಂದು ನನ್ನ ಮೊದಲ ದಿನ'ಎಂದು ಬರೆದು ಪ್ರದರ್ಶಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಹೊಸ ಬಟ್ಟೆ, ಬ್ಯಾಗ್ , ಛತ್ರಿ ಧರಿಸಿ ಪಾಲಕರೊಂದಿಗೆ ಆಗಮಿಸಿದ ಮಕ್ಕಳನ್ನು ಆಕರ್ಷಿಸುವ ರೀತಿಯಲ್ಲಿ ಅಂಗನವಾಡಿಗಳನ್ನು ಬಣ್ಣ ಬಣ್ಣದ ಬಲೂನ್ , ಹಾರಗಳಿಂದ ಅಲಂಕರಿಸಲಾಗಿತ್ತು. ನಾನಾ ಪಕ್ಷಿಗಳು ಮತ್ತು ಪ್ರಾಣಿಗಳ ಚಿತ್ರಗಳನ್ನು ಗೋಡೆಯಲ್ಲಿ ಅಲಂಕರಿಸಲಾಗಿತ್ತು. ಜಿಲ್ಲೆಯ ಎಲ್ಲಾ ಐ.ಸಿ.ಡಿ.ಎಸ್‍ಅದರ ಅಂಗವಾಗಿ ವರ್ಣರಂಜಿತ ಪ್ರವೇಶೋತ್ಸವವನ್ನು ಆಯೋಜಿಸಲಾಗಿತ್ತು. ಪಂಚಾಯಿತಿಗಳಲ್ಲಿ ಪಂಚಾಯಿತಿ ಮಟ್ಟದ ಪ್ರವೇಶೋತ್ಸವ ನಡೆಯಿತು. ಈ ವರ್ಷ ಪ್ರತಿ ಅಂಗನವಾಡಿಯಲ್ಲಿ ಆಟ, ಹಾಡು, ಕಥೆಗಳೊಂದಿಗೆ ಪ್ರವೇಶೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರವೇಶೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೆÇ್ರಫೈಲ್ ಚಿತ್ರ ಅಭಿಯಾನ ನಡೆಸಲಾಯಿತು. ನವಾಗತ ಮಕ್ಕಳಿಗೆ ಬಣ್ಣದ ಪುಸ್ತಕಗಳು, ಪೆಟ್ಟಿಗೆಗಳು ಮತ್ತು ಬಳಪಗಳನ್ನು ಪ್ರಾಯೋಜಿಸಲಾಯಿತು.