ಉಪ್ಪಳ: ಪೈವಳಿಕೆ ಸಮೀಪದ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಮಂದಿರದಲ್ಲಿ ಮೇ 7ರಂದು ಲಲಿತಕಲಾ ಏಕದಿನ ಶಿಬಿರವು ನಡೆಯಲಿದೆ. ಈ ಶಿಬಿರದಲ್ಲಿ ಕಾರ್ಟೂನ್ ಪ್ರಾತ್ಯಕ್ಷಿಕೆ, ರಸಪ್ರಶ್ನೆ, ವಯಲಿನ್ ವಾದನ, ಭಜನೆ, ಚಿತ್ರ ರಚನೆ, ಚಿತ್ರಕಲಾ ಪ್ರದರ್ಶನ, ಹಾಡು, ನೃತ್ಯ ಪ್ರದರ್ಶನ, ಕಾವ್ಯವಾಚನ, ಹಿರಿಯ ಜೊತೆ ಸಂವಾದ ನಡೆಯಲಿದೆ. ಈ ಸಂದರ್ಭದಲ್ಲಿ ಡಾ. ಪ್ರಮೀಳಾ ಮಾಧವ್ ಅವರ ಕೃತಿ ಬಿಡುಗಡೆ ನಡೆಯಲಿದೆ. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಬಾಲಚಂದ್ರನ್ ಪೆರಿಯ, ಡಾ. ಪಿ ಶ್ರೀಕೃಷ್ಣ ಭಟ್, ಡಾ. ಗೋಪಕುಮಾರ್ ವಿ, ವಿರಾಜ್ ಅಡೂರು, ಬಾಲ ಮಧುರಕಾನನ, ಅರುಣಾ ನಾಗರಾಜ್, ಮೇಧಾ, ಆದಿಶ್ರೀ, ಡಾ. ರಮಾನಂದ ಬನಾರಿ, ಶೈಲೆಂದ್ರನ್ ಎಂ ವಿ, ರಾಧಾಕೃಷ್ಣ ಬಲ್ಲಾಳ್, ಸದಾನಂದನ್ ಮಾಸ್ತರ್, ನೀರಜಾ ಭಾಗವಹಿಸಲಿದ್ದಾರೆ ಎಂದು ಶಿಬಿರ ಸಂಯೋಜಕ ಪ್ರೊ.. ಪಿ ಎನ್ ಮೂಡಿತ್ತಾಯ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಮಕ್ಕಳನ್ನು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.