HEALTH TIPS

ವಿವಾದಗಳಿಂದ 'ಕೇರಳ ಸ್ಟೋರಿ'ಗೆ ಉಚಿತ ಜಾಹೀರಾತು: ಮೊದಲ ದಿನ 7.5 ಕೋಟಿ ಗಳಿಕೆ: ಮೊದಲ ದಿನವೇ ಭಾರೀ ಕಲೆಕ್ಷನ್ ಗಳಿಸಿದ 5ನೇ ಹಿಂದಿ ಚಿತ್ರ

                   ತಿರುವನಂತಪುರಂ: ಸುದೀಪೆÇ್ತೀ ಸೇನ್ ನಿರ್ದೇಶನದ 'ಕೇರಳ ಸ್ಟೋರಿ' ಮೊದಲ ದಿನವೇ 7.5 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಗಳು ತಿಳಿಸಿವೆ.

            ಇದು ರಾಷ್ಟ್ರಮಟ್ಟದಲ್ಲಿ ಬಂದ ಆದಾಯ. ಕೇರಳ ಸ್ಟೋರಿ ಮುಂಗಡ ಬುಕ್ಕಿಂಗ್‍ಗಿಂತ ಹೆಚ್ಚು ಸ್ಪಾಟ್ ಬುಕ್ಕಿಂಗ್‍ಗಳನ್ನು ಪಡೆದುಕೊಂಡಿದೆ. ಸಿಂಗಲ್ ಸ್ಕ್ರೀನ್ ಗಳಿಂದಲೂ ಕಲೆಕ್ಷನ್ ಹೆಚ್ಚು. ಶನಿವಾರ ಮತ್ತು ಭಾನುವಾರ ಗಳಿಕೆ ದ್ವಿಗುಣಗೊಂಡಿರುವ ಸೂಚನೆಗಳೂ ಇವೆ. 

            ಮಲ್ಟಿಪ್ಲೆಕ್ಸ್ ಚೈನ್ ಗಳಾದ ಪಿವಿಆರ್, ಐನಾಕ್ಸ್ ಮತ್ತು ಸಿನೆಪೆÇಲಿಸ್‍ನಿಂದ ನಾಲ್ಕು ಕೋಟಿ ರೂ.ಆದಾಯ ಗಳಿಕೆಯಾಗಿದೆ. ಅಕ್ಷಯ್ ಕುಮಾರ್ ಅವರ ಸೆಲ್ಫಿ (ರೂ. 2.55 ಕೋಟಿ), ಕಾರ್ತಿಕ್ ಆರ್ಯನ್ ಅವರ ಶೆಹಜಾದಾ (ರೂ. 6 ಕೋಟಿ) ಮತ್ತು ವಿವಾದಾತ್ಮಕ ದಿ ಕಾಶ್ಮೀರ್ ಫೈಲ್ಸ್ (ರೂ. 3.5 ಕೋಟಿ) ಗಿಂತ ಕೇರಳ ಸ್ಟೋರಿ 1ನೇ ದಿನದಂದು ಉತ್ತಮ ಓಪನಿಂಗ್ ಪಡೆದುಕೊಂಡಿದೆ.

           ಚಿತ್ರ ಬಿಡುಗಡೆಗೂ ಮುನ್ನ ನಡೆದ ವಿವಾದವು ಕೇರಳ ಸ್ಟೋರಿ ಹೆಚ್ಚಿನ ಗಮನ ಹರಿಸಲು ಕಾರಣವಾಯಿತು. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿತ್ರಮಂದಿರಗಳಿಗೆ ಆಗಮಿಸಿದರು. ಮುಂಬರುವ ವಾರಗಳಲ್ಲಿ ಇನ್ನಷ್ಟು ಬರುವ ನಿರೀಕ್ಷೆಯಿದೆ. ಏಕೆಂದರೆ ಚಿತ್ರದ ಬಗ್ಗೆ ವಿವಾದಗಳು ಹೆಚ್ಚುತ್ತಿವೆ. ಕೇರಳದಲ್ಲಿ ಸಿಪಿಎಂ, ಡಿವೈಎಫ್‍ಐ ಮತ್ತು ಕಾಂಗ್ರೆಸ್ ಪಕ್ಷಗಳು ಒಗ್ಗಟ್ಟಾಗಿ ಚಿತ್ರದ ವಿರುದ್ಧ ಹರಿಹಾಯ್ದಿದ್ದು, ಚಿತ್ರವು ಹೆಚ್ಚಿನ ಗಮನ ಮತ್ತು ಆಸಕ್ತಿಯನ್ನು ಪಡೆಯುತ್ತಿದೆ. ರಾಜಕೀಯ ಒತ್ತಡ ಮತ್ತು ಬೆದರಿಕೆಗಳಿಂದಾಗಿ ಕೇರಳದ ಕೆಲವು ಥಿಯೇಟರ್‍ಗಳಲ್ಲಿ ಚಿತ್ರ ಪ್ರದರ್ಶನವನ್ನು ನಿಲ್ಲಿಸಲಾಗಿದೆ, ಆದರೆ ಹೆಚ್ಚಿನ ಥಿಯೇಟರ್‍ಗಳಿಗೆ ಚಿತ್ರವನ್ನು ತರಲು ಪ್ರಯತ್ನಿಸಲಾಗುತ್ತಿದೆ. ಚಿತ್ರ ತಡೆಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ನಲ್ಲಿ ನಡೆಸಿದ ಪ್ರಯತ್ನಗಳು ವಿಫಲವಾದ ನಂತರ, ಚಿತ್ರವು ಹೆಚ್ಚು ಜನರ ಗಮನ ಸೆಳೆದಿದೆ.

          ಹಿಂದಿ ಚಲನಚಿತ್ರವನ್ನು ಗಮನಿಸಿದರೆ, ಕೇರಳ ಸ್ಟೋರಿ 2023 ರ ಮೊದಲ ದಿನದ 5 ನೇ ಅತಿ ಹೆಚ್ಚು ಗಳಿಕೆಯಾಗಿದೆ. ಪಠಾಣ್, ಕಿಸ್ ಕಾ ಭಾಯ್ ಕಿಸಿ ಕಾ ಜಾನ್, ತೂ ಜೂಥಿ ಮೇ ಮಕರ್ ಮತ್ತು ಭೋಲಾ ನಾಲ್ಕು ಹಿಂದಿ ಚಲನಚಿತ್ರಗಳು ಕೇರಳ ಸ್ಟೋರಿಗಿಂತ ಆರಂಭಿಕ ದಿನದಲ್ಲಿ ಹೆಚ್ಚು ಗಳಿಸಿದವು.

                ಉದ್ದೇಶಪೂರ್ವಕವಾಗಿ ಇಸ್ಲಾಂಗೆ ಮತಾಂತರಗೊಂಡ ಯುವತಿಯರ ಕಥೆ ಹೇಳುವ ಬಾಲಿವುಡ್ ಚಿತ್ರ ‘ದಿ ಕೇರಳ ಸ್ಟೋರಿ’ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲರೂ ಕುಟುಂಬ ಸಮೇತ ಬಂದು ಸಿನಿಮಾ ನೋಡಬೇಕು ಎಂಬುದು ಪ್ರೇಕ್ಷಕರ ಅಭಿಪ್ರಾಯ.

      ಮೊನ್ನೆ ಕೇರಳದಲ್ಲಿ ಬಿಡುಗಡೆಯಾಗಿದ್ದ 'ಕೇರಳ ಸ್ಟೋರಿ'ಯ ಹಲವು ಪ್ರದರ್ಶನಗಳು ಒತ್ತಡದಿಂದ ರದ್ದಾಗಿವೆ. ಪಿವಿಆರ್‍ನ ಕೊಚ್ಚಿ ಮತ್ತು ತಿರುವನಂತಪುರಂ ಸ್ಕ್ರೀನ್‍ಗಳಲ್ಲಿ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಕೊಚ್ಚಿಯ ಲುಲು ಮಾಲ್, ಒಬೆರಾನ್ ಮಾಲ್ ಮತ್ತು ತಿರುವನಂತಪುರದ ಲುಲು ಮಾಲ್‍ನಲ್ಲಿನ ಪಿವಿಆರ್ ಪರದೆಗಳಲ್ಲಿನ ಪ್ರದರ್ಶನಗಳನ್ನು ಸಹ ರದ್ದುಗೊಳಿಸಲಾಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು 7.5 ಕೋಟಿ ಗಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries