ಕಾಸರಗೋಡು: ಜಿಲ್ಲೆಯಲ್ಲಿ ಕಸ ಮುಕ್ತ ನವಕೇರಳ ಅಭಿಯಾನದ ಅಂಗವಾಗಿ ಜೂನ್ 5ರ ವೇಳೆಗೆ ಶೇ.75ರಷ್ಟು ಸ್ಥಳೀಯಾಡಳಿತ ಸಂಸ್ಥೆಗಳನ್ನು ತ್ಯಾಜ್ಯ ಮುಕ್ತ ಪಂಚಾಯಿತಿಗಳಾಗಿ ಬದಲಾಯಿಸಲು ಯೋಜನೆಯಿರಿಸಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯತಿ ಮತ್ತು ಮಹಾನಗರ ಪಾಲಿಕೆಗಳನ್ನು ಕಸಮುಕ್ತ ಎಂದು ಘೋಷಿಸಲಾಗುವುದು. ತ್ಯಾಜ್ಯ ಮುಕ್ತ ಎಂದು ಘೋಷಿಸಲಾಗುವ ಸ್ಥಳೀಯಾಡಳಿತ ಸಂಸ್ಥೆಗಳನ್ನು, ಅದರ ನಿರಂತರ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆಗಳನ್ನು ಸಹ ಮಾಡಲಾಗುತ್ತಿದೆ. ದೀರ್ಘ ಕಾಲದಿಂದ ತ್ಯಜ್ಯ ಸುರಿಯುವ ಪ್ರದೇಶಗಳಲ್ಲಿ ಉದ್ಯಾನ ನಿರ್ಮಿಸಿ ಇಮತಹ ಜಗವನ್ನು ಸಂರಕ್ಷಿಸಲು ಕ್ರಮ ಕ್ಯಗೊಳ್ಳಲಾಗುವುದು. ಎನ್‍ಆರ್‍ಇಜಿಎಸ್ ಮತ್ತು ವಿದ್ಯಾರ್ಥಿ ಎಸ್‍ಪಿಎಸ್ ಇದರ ಮೆಲುಸ್ತುವಾರಿ ನೋಡಿಕೊಳ್ಳಲಿದೆ.
ಹಸಿರು ಕ್ರಿಯಾ ಸೇನೆಯು ತನ್ನ ಚಟುವಟಿಕೆಗಳನ್ನು ಚುರುಕುಗೊಳಿಸಿ ಮನೆ ಮತ್ತು ವ್ಯಾಪಾರಿ ಸಂಸ್ಥೆಗಳಿಂದ ಹೊರಬೀಳುವ ತ್ಯಾಜ್ಯ ವಿಲೇವಾರಿಯನ್ನು ತ್ವರಿತಗೊಳಿಸಲಾಗುವುದು.ರಸ್ತೆಬದಿಯ ಟೇಕ್ ಎ ಬ್ರೇಕ್ ವಿಶ್ರಾಂತಿ ಗೃಹಗಳ ಕಾರ್ಯಾಚರಣೆಯನ್ನು ಹೆಚ್ಚಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಯೋಜನೆ ಜಾರಿಗೊಳಿಸಲಾಗುವುದು. ಸಿಸಿ ಟಿವಿ ಉಪಕರಣಗಳನ್ನು ಬಳಸಿ ತ್ಯಾಜ್ಯದ ಸ್ಮಾಟ್ ಮಾನಿಟರಿಂಗ್ ವ್ಯವಸ್ಥೆ ತ್ವರಿತಗೊಳಿಸಲಾಗುವುದು. ನವಕೇರಳಂ ಯೋಜನೆಯಡಿ ನದಿಗಳು ಮತ್ತು ಕಾಲುವೆಗಳನ್ನು ಸ್ವಚ್ಛಗೊಳಿಸಲಾಗುವುದು. ಮೂಲದಲ್ಲಿಯೇ ಘನತ್ಯಾಜ್ಯ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಅಗತ್ಯದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಅಸ್ತಿತ್ವದಲ್ಲಿರುವ ಕಸದ ರಾಶಿಗಳು ಮತ್ತು ಸ್ಥಳೀಯ ಸೌಲಭ್ಯಗಳಲ್ಲಿ ನಿಯಮಿತವಾಗಿ ತ್ಯಾಜ್ಯ ಸುರಿಯುವ ಪ್ರದೇಶಗಳಲ್ಲಿ ಪ್ರಸ್ತುತ ಕೆಲಸ ನಡೆಸಲಾಗುತ್ತಿದೆ. ಕಸದ ಸಮಸ್ಯೆ ತೀವ್ರವಾಗಿರುವ ಮಂಗಲ್ಪಾಡಿ ಪಂಚಾಯಿತಿಯಲ್ಲಿ ಕಸ ಸಂಗ್ರಹ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಲೂ ತೀರ್ಮಾನಿಸಲಾಗಿದೆ. ಗೈಡ್‍ಗಳ ತಂಡ ಜೂನ್‍ನಿಂದ ಕಚೇರಿಗಳಿಗೆ ಭೇಟಿ ನೀಡಿ ಎಬಿಸಿಡಿ ಪ್ರಮಾಣಪತ್ರಗಳನ್ನು ನೀಡುವುದರ ಜತೆಗೆ ಶಾಲೆ ಪುನಾರಂಭಕ್ಕೆ ಮೊದಲು ಜಿಲ್ಲೆಯ ಎಲ್ಲ ಶಾಲೆಗಳ ಶೌಚಗೃಹಗಳನ್ನು ಸ್ವಚ್ಛಗೊಳಿಸಲು ಸಭೆ ನಿರ್ಧರಿಸಿದೆ. ಜಿಲ್ಲ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅದ್ಯಕ್ಷತೆ ವಹಿಸಿದ್ದರು.
¥