ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಯ ಸ್ಮರಣಾರ್ಥ ₹ 75 ವಿಶೇಷ ನಾಣ್ಯ ಬಿಡುಗಡೆ ಮಾಡುವುದಾಗಿ ಹಣಕಾಸು ಸಚಿವಾಲಯ ಹೇಳಿದೆ.
ಕೇಂದ್ರ ಹಣಕಾಸು ಸಚಿವಾಲಯ ಈ ನಾಣ್ಯವನ್ನು ಸಿದ್ದಪಡಿಸಿದೆ. ನಾಣ್ಯ ಸಂಪೂರ್ಣ ವಿಶೇಷತೆಯಿಂದ ಕೂಡಿದೆ.
ನಾಣ್ಯದ ಒಂದು ಬದಿ
ನಾಣ್ಯದ ಒಂದು ಭಾಗದಲ್ಲಿ ಅಶೋಕ ಸ್ತಂಭ ಹಾಗೂ ಸಿಂಹದ ಮುಖ ಇರಲಿದೆ. ಅದರ ಕೆಳಗೆ 'ಸತ್ಯ ಮೇವ ಜಯತೇ' ಎಂದು ಬರೆಯಲಾಗಿದೆ.
ನಾಣ್ಯದ ಎಡ ಭಾಗದಲ್ಲಿ ಭಾರತ್ ಎಂದು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಬಲ ಭಾಗದಲ್ಲಿ ಇಂಡಿಯಾ ಎಂದು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ರೂಪಾಯಿ ಚಿಹ್ನೆಯನ್ನು ದೊಡ್ಡದಾಗಿ ನಮೂದಿಸಲಾಗಿದೆ.
ನಾಣ್ಯದ ಮತ್ತೊಂದು ಬದಿ
ನಾಣ್ಯದ ಮತ್ತೊಂದು ಭಾಗದಲ್ಲಿ ಸಂಸತ್ ಸಂಕೀರ್ಣದ ಚಿತ್ರ ಇದೆ. ಮೇಲ್ಭಾಗದಲ್ಲಿ 'ಸಂಸದ್ ಸಂಕುಲ್' ಎಂದು ದೇವನಾಗರಿ ಲಿಪಿಯಲ್ಲೂ, ಕೆಳಭಾಗದಲ್ಲಿ 'ಪಾರ್ಲಿಮೆಂಟ್ ಕಾಂಪ್ಲೆಕ್ಸ್' ಎಂದೂ ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ.
ನಾಣ್ಯದ ವಿನ್ಯಾಸ...
ವೃತ್ತಾಕಾರದಲ್ಲಿರುವ ಈ ನಾಣ್ಯ 44 ಮಿಲಿ ಮೀಟರ್ ವ್ಯಾಸ ಹೊಂದಿರಲಿದೆ. 35 ಗ್ರಾಂ ತೂಕವಿದೆ.
ಶೇ 50ರಷ್ಟು ಬೆಳ್ಳಿ, ಶೇ 40ರಷ್ಟು ತಾಮ್ರ, ಶೇ 5ರಷ್ಟು ಸತು ಹಾಗೂ ಶೇ 5ರಷ್ಟು ಮಿಶ್ರಲೋಹ ಬಳಕೆ ಮಾಡಿ ಈ ನಾಣ್ಯವನ್ನು ತಯಾರಿಸಲಾಗಿದೆ.
ನೋಯಿಡಾ, ಕೋಲ್ಕತ್ತ, ಮುಂಬೈ ಹಾಗೂ ಹೈದ್ರಾಬಾದ್‌ನಲ್ಲಿ ಈ ನಾಣ್ಯಗಳನ್ನು ಮುದ್ರಿಸಲಾಗುವುದು.
ವಿಶೇಷ ಸ್ಮರಣಾರ್ಥವಾಗಿ ₹ 60, ₹ 75, ₹ 100, ₹ 125, ₹1000 ಮುಖ ಬೆಲೆಯ ನಾಣ್ಯಗಳನ್ನು ಈಗಾಗಲೇ ಮುದ್ರಿಸಲಾಗಿದೆ. ₹ 75 ಮುಖ ಬೆಲೆಯ ನಾಣ್ಯವನ್ನು ಈ ಹಿಂದೆ ಮುದ್ರಿಸಲಾಗಿತ್ತು. ಈಗ ನೂತನ ಸಂಸತ್ ಭವನ ಸಂಕೀರ್ಣದ ಲೋಕಾರ್ಪಣೆ ಸ್ಮರಣಾರ್ಥ ₹ 75 ಮುಖ ಬೆಲೆಯ ವಿಶೇಷ ನಾಣ್ಯ ಬಿಡುಗಡೆ ಮಾಡಲಾವುದು.
ಮನವಿ:ಸನ್ಮನಸ್ಸಿನ ಓದುಗರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮಸರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ.
ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:
ಗೂಗಲ್ ಪೇ: 7907952070
ಬ್ಯಾಂಕ್ ವಿವರ:
ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.