ಹಿರೋಷಿಮಾ: ಜಿ7 ಶೃಂಗಸಭೆಗಾಗಿ ಜಪಾನ್‌ನ ಹಿರೋಷಿಮಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಸ್ಥಿರತೆಯ ಸಂದೇಶ ಕಳುಹಿಸುವ ಪ್ರಯತ್ನದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮರುಬಳಕೆಯ ವಸ್ತುಗಳಿಂದ ಮಾಡಿದ ಜಾಕೆಟ್ ಅನ್ನು ಧರಿಸಿದ್ದರು ಎಂದು ಎಎನ್‌ಐ ಟ್ವೀಟಿಸಿದೆ.

ಮರುಬಳಕೆಯ ಬಟ್ಟೆಗಳಿಗೆ ಬೇಕಾದ ಫ್ಯಾಬ್ರಿಕ್ ಅನ್ನು ಪೆಟ್ ಬಾಟಲಿಗಳಿಂದ ತಯಾರಿಸಲಾಗುತ್ತದೆ. ಅವುಗಳನ್ನು ಪುಡಿ ಮಾಡಿ, ಕರಗಿಸಿ, ಬಣ್ಣವನ್ನು ಸೇರಿಸಲಾಗುತ್ತದೆ. ಬಳಿಕ ನೂಲಾಗಿ ಪರಿವರ್ತಿಸಲಾಗುತ್ತದೆ.
ಅಂದಹಾಗೆ, ಮೋದಿ ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ ಮಾಡಿದ ಜಾಕೆಟ್ ಧರಿಸಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ಮೋದಿ ಅವರು ಸಂಸತ್ತಿನಲ್ಲಿ ನೆಹರೂ ಜಾಕೆಟ್ ಅನ್ನು ಧರಿಸಿದ್ದರು. ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆಯ ವಸ್ತುಗಳನ್ನು ಬಳಸಿ ತಯಾರಿಸಲಾಗಿದ್ದ ಜಾಕೆಟ್ ಅನ್ನು ಅವರಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಉಡುಗೊರೆಯಾಗಿ ನೀಡಿತ್ತು.
ಜಿ7 ಸಭೆಯಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ನೈಸರ್ಗಿಕ ಸಂಪನ್ಮೂಲಗಳನ್ನು ಸಮಗ್ರವಾಗಿ ಬಳಸುವ ಅಗತ್ಯವನ್ನು ಶ್ಲಾಘಿಸಿದರು.
'ಅಭಿವೃದ್ಧಿ ಮಾದರಿಯೇ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು, ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಗತಿಗೆ ಅಡ್ಡಿಯಾಗಬಾರದು ಎಂದು ನಾನು ನಂಬುತ್ತೇನೆ'ಎಂದು ಬಹು ಬಿಕ್ಕಟ್ಟುಗಳ ಪರಿಹರಿಸಲು ಒಟ್ಟಾಗಿ ಕೆಲಸ ಮಾಡುವ ಕುರಿತ ನಡೆದ ಅಧಿವೇಶನದಲ್ಲಿ ಹೇಳಿದರು.
ಜಗತ್ತಿನಾದ್ಯಂತ ರಸಗೊಬ್ಬರ ನೇತೃತ್ವದ ಕೃಷಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಬಹುದಾದ ನೈಸರ್ಗಿಕ ಕೃಷಿಯ ಹೊಸ ಮಾದರಿಯ ರಚನೆಯ ಬಗ್ಗೆಯೂ ಪ್ರಧಾನಮಂತ್ರಿ ಒತ್ತಿ ಹೇಳಿದರು.