ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಗರ್ವಾಲ್ ಎಂಬ ಪ್ರದೇಶದಲ್ಲಿರುವ ದೇವಾಲಯ ದೇಶ-ವಿದೇಶಗಳಲ್ಲಿ ನೆಲೆಸಿರುವ ಭಕ್ತರಿಗೆ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ.
ವಾಲುತ್ತಿದೆ ದೇವಾಲಯ
ಇತ್ತೀಚಿಗೆ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ ಜಗತ್ತಿನ ಅತಿ ಎತ್ತರದ ಶಿವ ದೇವಾಲಯ ಕೂಡಾ ವಾಲುತ್ತಿರುವ ಸುದ್ದಿ ಆಘಾತ ತಂದಿದೆ.
ಹಿಮಾಲಯದ ರುದ್ರಪ್ರಯಾಗ ಜಿಲ್ಲೆಯಲ್ಲಿ 12,073 ಅಡಿ ಎತ್ತರದಲ್ಲಿರುವ ತುಂಗನಾಥ ದೇವಾಲಯವು ಐದರಿಂದ ಆರು ಡಿಗ್ರಿಗಳಷ್ಟು ವಾಲುತ್ತಿದೆ. ಇದಲ್ಲದೆ, ದೇವಾಲಯದ ಸಂಕೀರ್ಣದಲ್ಲಿನ ಸಣ್ಣ ರಚನೆಗಳು 10 ಡಿಗ್ರಿಗಳಷ್ಟು ವಾಲುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸ್ಮಾರಕವಾಗಿಸಲು ಸಕಲ ಸಿದ್ದತೆ
ಈ ಕುರಿತು ಪ್ರತಿಕ್ರಿಯಿಸಿರುವ ಪುರಾತತ್ವ ಇಲಾಖೆಯ ಅಧಿಕಾರಿ ಮನೋಜ್ ಕುಮಾರ್ ಮೊದಲು ದೇವಾಲಯದ ಸುತ್ತ ಆಗಿರುವ ಹಾನಿಯ ಕುರಿತು ಕಾರಣಗಳನ್ನು ಕಂಡುಕೊಳ್ಳಬೇಕಿದೆ. ಕೂಲಂಕುಷವಾಗಿ ಪರಿಶೀಲನೆ ನಡೆಸಿದ ನಂತರ ಆಗಬೇಕಿರುವ ಕಾರ್ಯದ ಕುರಿತು ಪಟ್ಟಿಯನ್ನು ಸಿದ್ದಪಡಿಸಲಾಗುವುದು.
ಸರ್ಕಾರ ದೇವಾಲಯವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕೋರಿ ಅರ್ಜಿಯನ್ನು ಸಹ ಆಹ್ವಾನಿಸುತ್ತಿದೆ ಎಂದು ಮನೋಜ್ ಕುಮಾರ್ ತಿಳಿಸಿದ್ಧಾರೆ.