ಕೊಚ್ಚಿ: ‘ದಿ ಕೇರಳ ಸ್ಟೋರಿ’ ಚಿತ್ರದ ವಿರುದ್ಧ ಕಾಂಗ್ರೆಸ್ ಮತ್ತು ಸಿಪಿಎಂ ತಳೆದಿರುವ ನಿಲುವು ಇಬ್ಬಗೆ ಧೋರಣೆಯದ್ದೆಂದು ಬಿಜೆಪಿ ಮುಖಂಡ ಅನಿಲ್ ಆಂಟೋನಿ ಹೇಳಿದ್ದಾರೆ.
ಗುಜರಾತ್ ಗಲಭೆ ಆಧಾರಿತ ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದವರು ಈಗ ಈ ಚಿತ್ರದ ವಿರುದ್ಧ ಧ್ವನಿಯೆತ್ತಿರುವುದು ವಿರೋಧಾಭಾಸ ಎಂದು ಅನಿಲ್ ಆಂಟೋನಿ ಹೇಳಿದ್ದಾರೆ.
ಬಿಬಿಸಿ ಡಾಕ್ಯುಮೆಂಟರಿ ಬಂದಾಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದೇವೆ ಎಂದು ಹೇಳಿದ್ದ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಈಗ ದಿ.ಕೇರಳ ಸ್ಟೋರಿ ಚಿತ್ರ ನಿಷೇಧÀಕ್ಕೆ ಪಟ್ಟು ಹಿಡಿದಿವೆ. ಸ್ವಾತಂತ್ರ್ಯಕ್ಕಾಗಿ ವಿರೋಧ ಪಕ್ಷದ ಹೋರಾಟವು ಸಂಕುಚಿತ ಹುಸಿ-ರಾಜಕೀಯ ಲಾಭಗಳಿಗೆ ಒಳಪಟ್ಟಿರುತ್ತದೆ. ‘ದಿ ಕೇರಳ ಸ್ಟೋರಿ’ ಸಿನಿಮಾ ಕೆಲವು ಹುಡುಗಿಯರು ಅನುಭವಿಸುವ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ ಎಂದು ಅನಿಲ್ ಆಂಟೋನಿ ತಿಳಿಸಿದ್ದಾರೆ.