ಕೊಚ್ಚಿ: ಮಲಬಾರ್ ದೇವಸ್ವಂ ಮಂಡಳಿ ಅಧೀನದಲ್ಲಿರುವ ದೇವಾಲಯಗಳು ಜಾಹೀರಾತಿಗೆ 15 ಸಾವಿರ ರೂ. ಪಾವತಿಸಬೇಕು ಎಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ಟೀಕಿಸಿದೆ.
ದೇವಸ್ಥಾನಗಳು ಸಹಕಾರಿ ಸಂಘಗಳಲ್ಲ ಮತ್ತು ರಾಜಕೀಯ ಉದ್ದೇಶಕ್ಕಾಗಿ ಹಣ ಸಂಗ್ರಹಿಸುವಂತೆ ದೇವಸ್ಥಾನಗಳಿಂದ ಹಣ ಸಂಗ್ರಹಿಸಬಹುದು ಎಂಬ ತಿಳುವಳಿಕೆ ಇದೆಯೇ ಎಂದು ಹೈಕೋರ್ಟ್ ದೇವಸ್ವಂ ಮಂಡಳಿಗೆ ಪ್ರಶ್ನಿಸಿದೆ. ವಿವಾದಾತ್ಮಕ ಆದೇಶ ನೀಡಿದ ದೇವಸ್ವಂ ಆಯುಕ್ತರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿದೆ.
ಮಲಬಾರ್ ದೇವಸ್ವಂ ಮಂಡಳಿ ಎಲ್ಲಾ ದೇವಾಲಯಗಳು ಮತ್ತು ಇತರ ಆರಾಧನಾಲಯಗಳಿಗೆ ಕಾಟಾಂಬುಳ ದೇವಾಲಯದ ವತಿಯಿಂದ ನಿರ್ಮಾಣಗೊಂಡು ಉದ್ಘಾಟನೆಗೊಳ್ಳಲಿರುವ ಡಯಾಲಿಸಿಸ್ ಘಟಕದ ಸ್ಮರಣೆ ಸಂಚಿಕೆಗೆ ಜಾಹೀರಾತು ಕಡ್ಡಾಯ ನೀಡಬೇಕೆಂಬ ಆದೇಶ ಪ್ರಶ್ನಿಸಿ ಮಂಚೇರಿ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ದೇವಸ್ವಂ ಮಂಡಳಿ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ. ಜೂನ್ 16 ರಂದು ಮತ್ತೆ ಅರ್ಜಿ ವಿಚಾರಣೆ ನಡೆಯಲಿದೆ.