ತಿರುವನಂತಪುರಂ: ಯುವಕನೊಬ್ಬ ತನ್ನ ಪತ್ನಿಯ ಸ್ಕೂಟರ್‍ನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಹೋಗುತ್ತಿರುವುದು ರಸ್ತೆಯಲ್ಲಿ ಅಳವಡಿಸಲಾಗಿದ್ದ ಎಐ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎಐ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿತ್ರ ಆರ್‍ಸಿ ಮಾಲೀಕನ ಪತ್ನಿಯ ಪೋನ್‍ಗೆ ಬಂದಾಗ ಕೌಟುಂಬಿಕ ಕಲಹ, ಗಲಾಟೆಗೆ ಬಳಿಕ ಹೇತುವಾಯಿತು. ಕರಮಾನ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೆಲ್ಮೆಟ್ ಧರಿಸದೇ ಪತ್ನಿಯ ಸ್ಕೂಟರ್‍ನಲ್ಲಿ ಬಂದ ಯುವಕ ಹಾಗೂ ಯುವತಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಘಟನೆಯ ನಂತರ, ಆರ್‍ಸಿ ಮಾಲೀಕರಾದ ಪತ್ನಿಯ ಪೋನ್‍ಗೆ ಚಿತ್ರ, ದಂಡ ಮತ್ತು ಸಂದೇಶ ಬಂದಿತು. ಇದಾದ ಬಳಿಕ ಸ್ಕೂಟರ್ ಹಿಂದಿದ್ದ ಮಹಿಳೆ ಯಾರು ಎಂದು ಕೇಳಿ ಪತ್ನಿ ಜಗಳ ಆರಂಭಿಸಿದಳು. ತಾನು ದಾರಿಹೋಕಳಾದ ಮಹಿಳೆಗೆ ಲಿಫ್ಟ್ ಕೊಡಿಸಿದ್ದೇನೆ ಎಂದು ಯುವಕ ಹೇಳಿದರೂ ಸಮಸ್ಯೆ ಬಗೆಹರಿಯದೆ ತಾರಕಕ್ಕೇರಿತು ಎಂದು ಪೆÇಲೀಸರು ತಿಳಿಸಿದ್ದಾರೆ. ಕೊನೆಗೆ ತನಗೆ ಮತ್ತು ತಮ್ಮ ಮೂರು ವರ್ಷದ ಮಗುವಿಗೆ ಥಳಿಸಿದ್ದಾರೆ ಎಂದು ಪತ್ನಿ ನೀಡಿದ ದೂರಿನ ಮೇರೆಗೆ ಪತಿಯನ್ನು ಪೆÇಲೀಸರು ಹಿಡಿದು ಬಂಧಿಸಿದ್ದಾರೆ. ಇಡುಕ್ಕಿ ಮೂಲದ ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಎಐ ಕ್ಯಾಮೆರಾಗಳ ಅಳವಡಿಕೆಯಿಂದ ಕೌಟುಂಬಿಕ ಕಲಹಗಳು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚುತ್ತಿವೆ. ಈ ಬಗ್ಗೆ ಸರ್ವರೂ ಜಾಗೃತರಾಗುವ ಅಗತ್ಯವನ್ನು ಈ ಘಟನೆ ಸಾಬೀತುಪಡಿಸಿದೆ.