ನವದೆಹಲಿ: 'ರಾಷ್ಟ್ರದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಹಿರಿಯ ವಿಜ್ಞಾನಿಯೊಬ್ಬರನ್ನು ವಜಾಗೊಳಿಸಿದರೆ ಅದನ್ನು ಅಕ್ರಮ ಎಂದು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ' ಎಂದು ಸುಪ್ರೀಂ ಕೋರ್ಟ್ ಶನಿವಾರ ಹೇಳಿದೆ.
ನವದೆಹಲಿ: 'ರಾಷ್ಟ್ರದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಹಿರಿಯ ವಿಜ್ಞಾನಿಯೊಬ್ಬರನ್ನು ವಜಾಗೊಳಿಸಿದರೆ ಅದನ್ನು ಅಕ್ರಮ ಎಂದು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ' ಎಂದು ಸುಪ್ರೀಂ ಕೋರ್ಟ್ ಶನಿವಾರ ಹೇಳಿದೆ.
'ಇಸ್ರೊದಂತಹ ಮಹತ್ವದ ಸಂಸ್ಥೆಯಲ್ಲಿ ಕೆಲಸದಲ್ಲಿದ್ದುಕೊಂಡು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿರುವ, ವಿದೇಶಿ ಸಂಸ್ಥೆ ಜೊತೆ ಒಡನಾಟ ಹೊಂದಿರುವ ವಿಜ್ಞಾನಿಯನ್ನು ವಜಾಗೊಳಿಸಿದರೆ ಅದನ್ನು ಅನಗತ್ಯ ಕ್ರಮ ಎಂದೂ ಹೇಳಲು ಆಗುವುದಿಲ್ಲ' ಎಂದಿದೆ.
ಈ ಸಂಬಂಧ ಡಾ.ವಿ.ಆರ್.ಸನಲ್ ಕುಮಾರ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ವಜಾಗೊಳಿಸಿದೆ.
ಎರ್ನಾಕುಲಂನ ಕೇಂದ್ರೀಯ ಆಡಳಿತಾತ್ಮಕ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿ ಸನಲ್ ಅವರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಅವರ ಮನವಿಯನ್ನು ಹೈಕೋರ್ಟ್ 2012ರ ಜನವರಿ 16ರಂದು ತಿರಸ್ಕರಿಸಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.