ಎರ್ನಾಕುಳಂ: ಮ್ಯಾರಥಾನ್ ಓಟಕ್ಕೆ ಬಟ್ಟೆ ಅಡ್ಡಿಯಲ್ಲ ಎಂಬುದನ್ನು ಪದ್ಮಿನಿ ನಾಯರ್ ಸಾಬೀತುಪಡಿಸಿದ್ದಾರೆ. ಕಾಸರಗೋಡಿನ ಕೋಳಿಯಡ್ಕ ಮೂಲದ ಪದ್ಮಿನಿ ಅವರು ಫೆಡರಲ್ ಬ್ಯಾಂಕ್ ಕೊಚ್ಚಿ ಮ್ಯಾರಥಾನ್ ನ 3 ಕಿ.ಮೀ ಗ್ರೀನ್ ಓಟದಲ್ಲಿ ಸೀರೆ ಉಟ್ಟು ಓಡಿ ದಾಖಲೆ ನಿರ್ಮಿಸಿರುವರು. ಈ ಗೃಹಿಣಿ 2020 ರ ಮುಂಬೈ ಮ್ಯಾರಥಾನ್‍ನಲ್ಲಿ ಸೀರೆ ಧರಿಸಿ ಭಾಗವಹಿಸಿದ್ದರು.
ಕಸ ಮುಕ್ತ ಮತ್ತು ಸುರಕ್ಷಿತ ಕೇರಳದ ಕನಸು ನನಸಾಗಬೇಕು. ಅದೊಂದೇ ಗುರಿ. ಈ ಮ್ಯಾರಥಾನ್‍ನಲ್ಲಿ ಭಾಗವಹಿಸಲು ಮಾತ್ರ ಕೊಚ್ಚಿಗೆ ಬಂದಿದ್ದೇನೆ ಎಂದು ಅವರು ಹೇಳಿದರು.
ಮೂರು ಕಿಲೋಮೀಟರ್ ಮ್ಯಾರಥಾನ್ ಅನ್ನು ಯಶಸ್ವಿಯಾಗಿ ಮುಗಿಸಿ ಪದಕದೊಂದಿಗೆ ನಿಂತಿರುವ ತನ್ನ ಕನಸುಗಳನ್ನು ನನಸಾಗಿಸಲು ತೊಡುವ ಉಡುಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಪದ್ಮಿನಿ ನಾಯರ್ ಮಾಡಿ ತೋರಿಸಿದ್ದಾರೆ.