HEALTH TIPS

ಸಿಲ್ವರ್ ಲೈನ್: ಹಸಿರು ಯೋಜನೆ ಎಂಬ ಸರ್ಕಾರದ ಹಕ್ಕು ತಪ್ಪು: ಯೋಜನೆ ಮರುಪರಿಶೀಲನೆಯಾಗಬೇಕು ಎಂದ ಶಾಸ್ತ್ರ ಸಾಹಿತ್ಯ ಪರಿಷತ್ತು

                 ತಿರುವನಂತಪುರಂ: ಸಿಪಿಎಂನ ಅಂಗಸಂಸ್ಥೆಯಾದ ಶಾಸ್ತ್ರ ಸಾಹಿತ್ಯ ಪರಿಷತ್ತು ಸಿಲ್ವರ್ ಲೈನ್ ಯೋಜನೆ ಬಗ್ಗೆ ಅಪಶ್ರುತಿ ಹಾಡಿದೆ. 

           ಪರಿಷತ್ ನ ಅಧ್ಯಯನ ವರದಿಯಲ್ಲಿ ಸಿಲ್ವರ್ ಲೈನ್ ಯೋಜನೆಯನ್ನು ಟೀಕಿಸಲಾಗಿದೆ. ಸಿಲ್ವರ್ ಲೈನ್ ಯೋಜನೆ ಹಸಿರು ಯೋಜನೆ ಎಂಬ ಸರ್ಕಾರದ ಹೇಳಿಕೆ ತಪ್ಪಾಗಿದ್ದು, ಯೋಜನೆ ಮರುಪರಿಶೀಲನೆ ನಡೆಸಬೇಕು ಎಂದು ಶಾಸ್ತ್ರ ಸಾಹಿತ್ಯ ಪರಿಷತ್ ತನ್ನ ವರದಿಯಲ್ಲಿ ತಿಳಿಸಿದೆ.

                ಡಿಪಿಆರ್ ಅಪೂರ್ಣವಾಗಿದೆ, ಡಿಪಿಆರ್ ದೊಡ್ಡ ಯೋಜನೆಗೆ ಅಗತ್ಯವಿರುವ ವಿವರಗಳನ್ನು ಹೊಂದಿಲ್ಲ. ವರದಿಯ ಪ್ರಕಾರ, ಯೋಜನೆಯ ಉದ್ದೇಶಿತ ಮಾರ್ಗದಲ್ಲಿ 55 ಹೆಕ್ಟೇರ್ ಮ್ಯಾಂಗ್ರೋವ್‍ಗಳು, 208.84 ಹೆಕ್ಟೇರ್ ಭತ್ತದ ಗದ್ದೆಗಳು, 18.40 ಹೆಕ್ಟೇರ್ ಹಿನ್ನೀರು, 1172.39 ಹೆಕ್ಟೇರ್ ಕೆರೆ ಮತ್ತು ಇತರ ಜಲಾಶ್ರಯಗಳು ಮತ್ತು 24.59 ಹೆಕ್ಟೇರ್ ಬನಗಳು ನಷ್ಟವಾಗುತ್ತವೆ. ಒಟ್ಟು 1500 ಹೆಕ್ಟೇರ್ ಸಸ್ಯವರ್ಗದ ನಷ್ಟವಾಗಲಿದೆ ಎಂದು ವರದಿ ಬೊಟ್ಟುಮಾಡಿದೆ. 

              ಭತ್ತದ ಗದ್ದೆಗಳು ಸೇರಿದಂತೆ ಜೌಗು ಪ್ರದೇಶಗಳ ಸ್ಥಿತಿ ಬದಲಾಗಲಿದೆ. ಇದು ಕೆಂಪು ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಜಲಚರ ಜಾತಿಗಳನ್ನು ಹೊಂದಿರುವ ಪ್ರದೇಶಗಳನ್ನು ಸಹ ಒಳಗೊಂಡಿದೆ. ಮಾರ್ಗದ 202 ಕಿ.ಮೀ ಕೂಡ ನಿಯಂತ್ರಿತ ಪ್ರದೇಶದಲ್ಲಿದೆ. ಒಡ್ಡುಗಳು ಎರಡರಿಂದ ಎಂಟು ಮೀಟರ್ ಎತ್ತರದಲ್ಲಿರುತ್ತವೆ ಮತ್ತು ಅದರ ಪೂರ್ವ ಪ್ರದೇಶಗಳು ಮಳೆಗಾಲದಲ್ಲಿ ಮುಳುಗುವ ಸಾಧ್ಯತೆ ಹೆಚ್ಚು. ಈ ಬಿಕ್ಕಟ್ಟನ್ನು ಎದುರಿಸುವ ಮಾರ್ಗಗಳ ಬಗ್ಗೆ ಅಥವಾ ಪರಿಸರ ಮರುಸ್ಥಾಪನೆ ಕ್ರಮಗಳ ಬಗ್ಗೆ ಡಿಪಿಆರ್ ಏನನ್ನೂ ಹೇಳುವುದಿಲ್ಲ ಎಂದು ಪರಿಷತ್ತು ಆರೋಪಿಸಿದೆ.

            ಉದ್ದೇಶಿತ ರಸ್ತೆಗಾಗಿಯೇ 7500ಕ್ಕೂ ಹೆಚ್ಚು ಮನೆಗಳು, 33 ಫ್ಲ್ಯಾಟ್‍ಗಳು, 454 ಕೈಗಾರಿಕೆಗಳು ಮತ್ತು 173 ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ನಷ್ಟವಾಗಲಿವೆ. ವರದಿ ಪ್ರಕಾರ, ವಾಸಕ್ಕೆ ಕಷ್ಟವಾಗುತ್ತದೆ. ಕೆಡವಲಾದ ಕಟ್ಟಡಗಳ ಅವಶೇಷಗಳನ್ನು ಏನು ಮಾಡಲಾಗುವುದು ಎಂದು ಡಿಪಿಆರ್ ಹೇಳುವುದಿಲ್ಲ ಎಂದೂ ವರದಿ ಹೇಳಿದೆ. ಸಿಪಿಎಂನ ಸ್ವಂತ ಅಂಗಸಂಸ್ಥೆಯ ಈ ನಿಲುವು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries