ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ಇತ್ತೀಚಿಗೆ ಹಲವು ನೆಗೆಟಿವ್ ವಿಚಾರಗಳಿಂದಲೇ ಸುದ್ದಿಯಾಗುತ್ತಿದ್ದು, ಕೋಚ್ನ ನೆಲದ ಮೇಲೆ ಕುಳಿತು ಯುವ ಜೋಡಿಯೊಂದು ಪರಸ್ಪರ ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಮೆಟ್ರೋ ರೈಲು ನಿಗಮ, ತನ್ನ ಪ್ರಯಾಣಿಕರಿಗೆ ಇಂತಹ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಮನವಿ ಮಾಡಿದೆ. ಇಂತಹ ಘಟನೆಗಳನ್ನು "ಸಮೀಪದ ಲಭ್ಯವಿರುವ ಮೆಟ್ರೋ ಸಿಬ್ಬಂದಿ ಅಥವಾ ಸಿಐಎಸ್‌ಎಫ್ ಸಿಬ್ಬಂದಿಗೆ ತಕ್ಷಣ ತಿಳಿಸಬೇಕು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬಹುದು" ಎಂದು ಮೆಟ್ರೋ ಅಧಿಕಾರಿಗಳು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ. ಇದನ್ನು ನೋಡಿ: ಮೆಟ್ರೋದಲ್ಲಿ ಉರ್ಫಿ ಜಾವೇದ್ ರಂತೆ ಡ್ರಸ್ ಧರಿಸಿದ್ದ ಯುವತಿ ಪ್ರತ್ಯಕ್ಷ; ಮಹಿಳೆಯರು ಕಕ್ಕಾಬಿಕ್ಕಿ!
ಈ ಯುವ ಜೋಡಿಯ ಲಿಪ್ ಲಾಕ್ ವಿಡಿಯೋಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧದ ಕಾಮೆಂಟ್ಗಳು ಬಂದಿವೆ.
ವಿಡಿಯೋ ನೋಡಿದ ನೆಟ್ಟಿಗರು, ಸ್ವಲ್ಪನಾದ್ರೂ ಸಂಸ್ಕೃತಿ ಉಳಿಸಿಕೊಳ್ಳಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ದೇಶದಲ್ಲಿ ಸಂಸ್ಕೃತಿ ಅನ್ನೋದು ದೆಹಲಿ ಮೆಟ್ರೋ ಏರುವಾಗಿ ಕೊನೆಯಾಗುತ್ತದೆ ಎಂದು ಟೀಕೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಲವರ್ಗಳು ಕೈಕೈ ಹಿಡಿದುಕೊಂಡು ಮೆಟ್ರೋದ ನೆಲದ ಮೇಲೆ ಕುಳಿತಿದ್ದು, ಸುತ್ತಲಿನ ಜನರ ಪರಿವೇ ಇಲ್ಲದೇ, ಲಿಪ್ಲಾಕ್ ಮಾಡುತ್ತಾ, ರೊಮಾನ್ಸ್ ಮಾಡುತ್ತಿದ್ದಾರೆ.