ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ 19ರಂದು ನಡೆಯಲಿರುವ ಸಾಮೂಹಿಕ ಮಹಾ ಚಂಡಿಕಾ ಯಾಗದ ಅಂಗವಾಗಿ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಮೇ 18ರಂದು ಮಧ್ಯಾಹ್ನ 2.30ಕ್ಕೆ ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ಹೊರಡಲಿರುವುದು. ನಗರದ ವಿವಿಧ ಕೇಂದ್ರಗಳ ಮೂಲಕ ಸಂಚರಿಸಿ ಪಾಂಗೋಡು ಕ್ಷೆತ್ರಕ್ಕೆ ಮೆರವಣಿಗೆ ತಲುಪಲಿದೆ.
19ರಂದು ಬೆಳಗ್ಗೆ ಪಾಂಗೋಡು ಕ್ಷೇತ್ರದ ಯಾಗಮಂಟಪ ವಠಾರದಲ್ಲಿ ಸ್ಥಳಶುದ್ಧಿ, ಯಾಗಪ್ರಕ್ರಿಯೆ ಆರಂಭ, ಸಾಮೂಹಿಕ ಪ್ರತ್ನೆ, ಚಂದ್ರಗಿರಿ ನದೀತಟದಿಂದ ಗಣ್ಯವ್ಯಕ್ತಿಗಳ ಆಗಮನದೊಂದಿಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. 11.30ಕ್ಕೆ ಕಲ್ಪೋಕ್ತ ಹೋಮದೊಂದಿಗೆ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಚಂಡಿಕಾ ಹೋಮ ಪೂರ್ಣಾಹುತಿ ನಡೆಯಲಿರುವುದು.