ಕಾಸರಗೋಡು: ಜಿಲ್ಲೆ ಸೇರಿದಂತೆ ಕೇರಳದ ವಿವಿಧೆಡೆ ಗಾಂಜಾ ಪೂರೈಸುತ್ತಿರುವ ಡ್ರಗ್ಸ್ ಮಾಫಿಯಾ ತಂಡದ ಪ್ರಮುಖ, ಮುಳ್ಳೇರಿಯಾ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯನ್ನು ಗುಪ್ತ ಕಾರ್ಯಾಚರಣೆ ಮೂಲಕ ಕಣ್ಣೂರು ಠಾಣೆ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಆಂಧ್ರಪ್ರದೆಶದ ಅರಣ್ಯದಲ್ಲಿ ಗುಪ್ತವಾಗಿ ಗಾಂಜಾ ಬೆಳೆ ಬೆಳೆಯುತ್ತಿದ್ದು, ಪೊಲೀಸರು ಅತ್ಯಂತ ಸಾಹಸಕರ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಈತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಈತನನ್ನು ಕಣ್ಣೂರಿಗೆ ಕರೆತರುವ ಯತ್ನದಲ್ಲಿದ್ದಾರೆ. ತಿಂಗಳ ಹಿಂದೆ ಕಣ್ಣೂರಿನಲ್ಲಿ ಪೊಲೀಸರು 60 ಕಿಲೋ ಗಾಂಜಾ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಉಳಿಕ್ಕಲ್ ನಿವಾಸಿ ಕೆ. ರೋಯ್ ಎಂಬಾತನನ್ನು ಬಂಧಿಸಿದ್ದರು. ಈತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕೇರಳಕ್ಕೆ ಗಾಂಜಾ ಪೂರೈಸುತ್ತಿರುವ ಈ ವ್ಯಕ್ತಿ ಬಗ್ಗೆ ಮಾಹಿತಿ ನೀಡಿದ್ದನು.ಈ ನಿಟ್ಟಿನಲ್ಲಿ ಕಣ್ಣೂರು ಎ.ಸಿ.ಪಿ ರತ್ನಾಕರನ್ ಟಿ.ಕೆ ನೇತ್ರತ್ವದಲ್ಲಿ ವಿಶೇಷ ತಂಡ ರಚಿಸಿ ಆಂಧ್ರದಲ್ಲಿ ಕಾರ್ಯಾಚರಣೆ ನಡೆಸಿದ್ದರು.