ಹರ್ನಿಯಾ ಸಮಸ್ಯೆ ಪುರುಷ ಹಾಗೂ ಮಹಿಳೆಯರಿಗೆ ಕಾಡುವುದಾದರೂ ಅತೀ ಹೆಚ್ಚಾಗಿ ಪುರುಷರಿಗೇ ಉಂಟಾಗುವುದು. ಮಹಿಳೆಯರಿಗೆ ಈ ಸಮಸ್ಯೆ ಕಂಡು ಬರುವುದು ತುಂಬಾನೇ ಕಡಿಮೆ. ಈ ಹರ್ನಿಯಾ ಪುರುಷರಿಗೆ ಏಕೆ ಅತೀ ಹೆಚ್ಚಾಗಿ ಕಂಡು ಬರುತ್ತದೆ, ಇದರ ಅಪಾಯಗಳೇನು ಎಂದು ನೋಡೋಣ:
ಹರ್ನಿಯಾ ಎಂದರೇನು?
ಸ್ನಾಯುಗಳು ದುರ್ಬಲವಾದಾಗ ಈ ಹರ್ನಿಯಾ ಸಮಸ್ಯೆ ಉಂಟಾಗುತ್ತದೆ. ಹರ್ನಿಯಾ ಸಮಸ್ಯೆ ಉಂಟಾದರೆ ಶಸ್ತ್ರ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಆದರೆ ಚಿಕಿತ್ಸೆ ಪಡೆಯದೇ ಹೋದರೆ ಪ್ರಾಣಕ್ಕೆ ಕಂಟಕವಾಗುವುದು.
ಈ ಹರ್ನಿಯಾ ಸಾಮಾನ್ಯವಾಗಿ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುವುದಾದರೂ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಯಾರಿಗೆ ಬೇಕಾದರೂ, ಯಾವುದೇ ವಯಸ್ಸಿನಲ್ಲಿ ಬೇಕಾದರೂ ಉಂಟಾಗಬಹುದು. ಕೆಲವರಲ್ಲಿ ಅನುವಂಶೀಯ ಕಾರಣಗಳಿಂದ ಉಂಟಾದರೆ , ಬೊಜ್ಜು, ಸ್ನಾಯುಗಳ ಮೇಲೆ ಅಧಿಕ ಒತ್ತಡದಿಂದಾಗಿ ಸ್ನಾಯುಗಳು ದುರ್ಬಲವಾಗುವುದು, ಮಲಬದ್ಧತೆ, ದೀರ್ಘಾವಧಿ ಕೆಮ್ಮು ಈ ಕಾರಣಗಳಿಂದಲೂ ಉಂಟಾಗುವುದು.
ಪುರುಷರಲ್ಲಿ ಹರ್ನಿಯಾ ಹೆಚ್ಚಾಗಿ ಕಾಣಿಸಲು ಕಾರಣವೇನು?
ಪುರುಷರ ದೇಹದ ಆಕೃತಿ ಹರ್ನಿಯಾ ಸಮಸ್ಯೆ ಪುರುಷರಲ್ಲಿ ಅತೀ ಹೆಚ್ಚಾಗಿ ಕಂಡು ಬರಲು ಕಾರಣವಾಗಿದೆ. ಪುರುಷರಲ್ಲಿ ರಕ್ತಸಂಚಾರ ವೃಷಣಕ್ಕೆ ಹೋಗಲು ಒಂದು ರಂಧ್ರವಿರುತ್ತದೆ, ಇದರಲ್ಲಿಹರ್ನಿಯಾ ಉಂಟಾಗುವುದು. ಮಹಿಳೆಯರಲ್ಲಿ ಪಿಲ್ವಿಕ್ ಭಾಗದಲ್ಲಿ ಕಂಡು ಬರುತ್ತದೆ. ಚಿಕ್ಕ ಮಕ್ಕಳಲ್ಲಿಯೂಹರ್ನಿಯಾ ಸಮಸ್ಯೆ ಉಂಟಾಗಬಹುದು. ಚಿಕ್ಕ ಮಕ್ಕಳಲ್ಲಿ ಹೊಕ್ಕಳಿನ ಭಾಗದಲ್ಲಿ ನೋವು ಉಂಟಾಗಿದ್ದರೆ ಅದುಹರ್ನಿಯಾ ಸಮಸ್ಯೆವಿರಬಹುದು.
ಹರ್ನಿಯಾ ಲಕ್ಷಣಗಳೇನು?
* ತೊಡೆಸಂದುಗಳಲ್ಲಿ ಗಂಟಿನಂತೆ ಕಂಡು ಬರುವುದು (ಊದಿದಂತೆ)
* ಆ ಭಾಗದಲ್ಲಿ ನೋವುಂಟಾಗುವುದು
* ಬಗ್ಗುವಾಗ, ಕೆಮ್ಮಿದಾಗ, ಭಾರ ಎತ್ತಿದಾಗ ನೋವು
* ಆ ಭಾಗದಲ್ಲಿ ತುಂಬಾನೇ ಸೆಳೆತ ಉಂಟಾಗುವುದು
ಮಕ್ಕಳಲ್ಲಿ ಹರ್ನಿಯಾ ಲಕ್ಷಣಗಳು
* ಮಗು ಅಳುವಾಗ ಅಥವಾ ಕೆಮ್ಮಿದಾಗ, ಮಲವಿಸರ್ಜನೆ ಮಾಡಿದಾಗ ಹೊಟ್ಟೆ ಭಾಗದಲ್ಲಿ ಕಂಡು ಬರುವುದು.
*ಹರ್ನಿಯಾವಿದ್ದರೆ ಮಗುವಿಗೆ ಹಸಿವು ಕಡಿಮೆಯಾಗುವುದು
* ಮಕ್ಕಳು ತುಂಬಾ ಕಿರಿಕಿರಿ ಮಾಡುತ್ತಾರೆ
ಯಾವ ಲಕ್ಷಣಗಳು ಅಪಾಯಕಾರಿ
* ಜ್ವರ, ವಾಂತಿ, ಸುಸ್ತು
* ತುಂಬಾ ನೋವು
* ಆ ಭಾಗ ಕೆಂಪಗಾಗುವುದು
* ಗ್ಯಾಸ್ ಪಾಸ್ ಮಾಡಲು ಕೂಡ ಕಷ್ಟವಾಗುವುದು.
ಈ ಬಗೆಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತೋರಿಸಿ, ತಡಮಾಡಬೇಡಿ.
ಹರ್ನಿಯಾ ಬಂದರೆ ಅದರಷ್ಟಿಗೆ ವಾಸಿಯಾಗುವುದೇ?
ಇಲ್ಲ,ಹರ್ನಿಯಾ ಬಂದರೆ ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿದೆ. ಕೆಲವರಿಗೆ ವೈದ್ಯರು ಸ್ವಲ್ಪ ನಿಧಾನವಾಗಿ ಮಾಡಿಸಿದರೆ ತೊಂದರೆಯಿಲ್ಲ ಎಂದು ಹೇಳುತ್ತಾರೆ. ಚಿಕ್ಕಹರ್ನಿಯಾ ಇದ್ದರೆ ಶಸ್ತ್ರ ಚಿಕಿತ್ಸೆ ಬೇಕಾಗುವುದಿಲ್ಲ, ಆದರೆಹರ್ನಿಯಾ ಅದರಷ್ಟಿಗೆ ಮಾತ್ರ ಹೋಗುವುದಿಲ್ಲ.
ಕೆಲವರುಹರ್ನಿಯಾ ಬಂದಾಗ ಶಸ್ತ್ರಚಿಕಿತ್ಸೆಗೆ ಭಯಪಟ್ಟು ಚಿಕಿತ್ಸೆ ಮಾಡಿಸುವುದಿಲ್ಲ, ಆದರೆ ಈ ರೀತಿ ಮಾಡುವುದು ಪ್ರಾಣಕ್ಕೆ ಅಪಾಯಕಾರಿ.ಹರ್ನಿಯಾ ಶಸ್ತ್ರ ಚಿಕಿತ್ಸೆ ಮಾಡಿದರೆ ಮತ್ತೆ ಏನೂ ತೊಂದರೆಯಿರಲ್ಲ.
ಹರ್ನಿಯಾ ನೀವು ತಾತ್ಕಾಲಿಕವಾಗಿ ಶಮನ ಮಾಡಲು ಏನು ಮಾಡಬೇಕು?
ಮಂಜುಗಡ್ಡೆಯ ಪ್ಯಾಕ್
ತುಂಬಾ ನೋವು ಇದ್ದಾಗ ಮಂಜುಗಡ್ಡೆಯ ಪ್ಯಾಕ್ ಇಟ್ಟರೆ ನೋವು ಕಡಿಮೆಯಾಗುವುದು.
ಹರಳೆಣ್ಣೆ
ಹರಳೆಣ್ಣೆಯನ್ನು ಬಿಸಿ ಮಾಡಿ ಬಿಸಿ ನೀರಿನಿಂದ ಶಾಖ ಕೊಟ್ಟರೆ ನೋವು ಕಡಿಮೆಯಾಗುವುದು.
ಆದರೆ ಈ ವಿಧಾನ ತಾತ್ಕಾಲಿಕ ಶಮನ ನೀಡುವುದು, ಶಾಶ್ವತವಾಗಿ ನೋವು ನಿವಾರಣೆಯಾಗಲು ಶಸ್ತ್ರಚಿಕಿತ್ಸೆ ಅನಿವಾರ್ಯ.