ತಿರುವನಂತಪುರಂ: ವಂದೇಭಾರತ್ ಎಕ್ಸ್ ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ. ಮಲಪ್ಪುರಂ ತಾನೂರ್ ಮೂಲದ ಮುಹಮ್ಮದ್ ರಿಜ್ವಾನ್ ಬಂಧಿತ ಆರೋಪಿ.
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಲ್ಲು ತೂರಿದ್ದರಿಂದ ರೈಲಿಗೆ ಹಾನಿಯಾಗಿದೆ ಎಂದು ಹೇಳಿಕೆ ನೀಡಿದ್ದಾನೆ. ತನ್ನದು ಅರಿಯದೆ ಆದ ಪ್ರಮಾದವೆಂದು ಆತ ಹೇಳಿಕೆ ನೀಡಿದ್ದಾನೆ. ಆದರೆ, ಪೊಲೀಸರು ಈ ಹೇಳಿಕೆಯನ್ನು ಒಪ್ಪಿಕೊಂಡಿಲ್ಲ. ರೈಲ್ವೆ ಪೆÇಲೀಸರು ಮತ್ತು ಕೇರಳ ಪೊಲೀಸರು ಜಂಟಿಯಾಗಿ ಆತನನ್ನು ಬಂಧಿಸಿದ್ದಾರೆ. ಈತನ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮಲಪ್ಪುರಂನ ತಿರೂರ್ ಮತ್ತು ತಾನೂರ್ ನಡುವಿನ ಕಂಪನಿಪಾಡಿ ಎಂಬ ಸ್ಥಳದಲ್ಲಿ ವಂದೇಭಾರತ್ ರೈಲಿಗೆ ಕಲ್ಲು ತೂರಾಟ ನಡೆದಿತ್ತು. ಘಟನೆ ಕುರಿತು ತಿರೂರ್ ಪೊಲೀಸರು ಮತ್ತು ರೈಲ್ವೆ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಸಿಸಿಟಿವಿ ಇಲ್ಲದ ನಿರ್ಜನ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿರುವುದು ತನಿಖೆಗೆ ಅಡ್ಡಿಯಾಯಿತು. ಸಿಕ್ಕಿರುವ ಮಹತ್ವದ ಹೇಳಿಕೆಯ ಆಧಾರದ ಮೇಲೆ ಮೊಹಮ್ಮದ್ ರಿಜ್ವಾನ್ ನನ್ನು ಬಂಧಿಸಲಾಗಿದೆ.
ವಂದೇ ಭಾರತ್ ಎಕ್ಸ್‍ಪ್ರೆಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 25 ರಂದು ಉದ್ಘಾಟಿಸಿದ್ದರು. ಮರುದಿನ ರೈಲಿನ ಮೇಲೆ ಮೊದಲ ಕಲ್ಲು ತೂರಾಟ ನಡೆಸಲಾಯಿತು.