ಬದಿಯಡ್ಕ: ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೆತನ್ ಕಾಸರಗೋಡು, ಶ್ರೀ ಕೆ.ನರಸಿಂಹ ಶ್ಯಾನುಭೋಗ ಮತ್ತು ಶ್ರೀಮತಿ ಶ್ಯಾಮಲಾ ಶ್ಯಾನುಭೋಗ ಸ್ಮರಣಾರ್ಥ ಹಾಗೂ ಭಾರತೀಯ ಜನತಾ ಪಾರ್ಟಿ ಬದಿಯಡ್ಕ ಪಶ್ಚಿಮ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರಗಿದ ಉಚಿತ ನೇತ್ರ ಚಿಕಿತ್ಸಾ ಶಿಬಿರದ ಫಲಾನುಭವಿಗಳಿಗೆ ಭಾನುವಾರ ಮಾನ್ಯ ಜೆಎಎಸ್‍ಬಿ ಶಾಲೆಯಲ್ಲಿ ಕನ್ನಡಕಗಳನ್ನು ವಿತರಿಸಲಾಯಿತು.
75 ಮಂದಿ ಫಲಾನುಭವಿಗಳು ಉಚಿತವಾಗಿ ಕನ್ನಡಕ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಡಾ ಎಸ್ ಬಿ ಖಂಡಿಗೆ ಅಧ್ಯಕ್ಷರು ಬಿ ಎಸ್ ಎಸ್ ಎ ಕಾಸರಗೋಡು ಇವರು ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಎಬಿ ಗಂಗಾಧರ ಬಲ್ಲಾಳ್, ಅಶ್ವಿನಿ ಮೊಳೆಯಾರು, ನವೀನ್ ಎಲ್ಲಂಗಳ, ಪಿ ಆರ್ ಸುನಿಲ್, ಮಧುಚಂದ್ರ ಮಾನ್ಯ ಉಪಸ್ಥಿತರಿದ್ದರು. ಬಿ. ಪ್ರೇಮ್ ಪ್ರಕಾಶ್ ಸ್ವಾಗತಿಸಿ, ರಾಮಕೃಷ್ಣ ಸಿ ಎನ್ ವಂದಿಸಿದರು.