ಕಾಸರಗೋಡು: ನನ್ನ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ಪ್ರಚಾರರ್ಥ ಹೊಜದುರ್ಗ ಜಿಲ್ಲಾ ಕಾರಾಗೃಹದ ಕೈದಿಗಳಿಗಾಗಿ ಫುಟ್ಬಾಲ್ ಶೂಟಿಂಗ್ ಸ್ಪರ್ಧೆ ಜರುಗಿತು. ಜೈಲು ಕೈದಿಗಳನ್ನು 14 ಜಿಲ್ಲಾ ತಂಡಗಳಾಗಿ ವಿಂಗಡಿಸಿ ಸ್ಪರ್ಧೆ ನಡೆಸಲಾಯಿತು. ಪ್ರತಿ ತಂಡವು 5 ಜನರನ್ನು ಒಳಗೊಂಡಿತ್ತು. ತಿರುವನಂತಪುರ ತಂಡವು ಒಂದಕ್ಕೆ ಎರಡು ಗೋಲುಗಳಿಂದ ಜಯಗಳಿಸಿತು. ಸ್ಪರ್ಧೆ ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂದನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಕೆ.ವೇಣು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಧೀಕ್ಷಕ ಗ್ರೇಡ್ ಟುನ ನವಾಜ್ ಬಾಬು, ಉಪ ಕಾರಾಗೃಹ ಅಧಿಕಾರಿಗಳಾದ ಎಂ.ವಿ.ಸಂತೋಷ್ ಕುಮಾರ್, ಎ.ವಿ.ಪ್ರಮೋದ್ ಉಪಸ್ಥಿತರಿದ್ದರು. ಮಾಹಿತಿ ಸಹಾಯಕಿ ಎಂ.ಶ್ವೇತಾ ಸ್ವಾಗತಿಸಿದರು. ಮಹಿಳಾ ಸಹಾಯಕ ಅಧೀಕ್ಷಕಿ ಸುಮಾ ವಂದಿಸಿದರು. ಸಹಾಯಕ ಜೈಲು ಅಧಿಕಾರಿಗಳಾದ ಯು.ಜಯಾನಂದನ್, ವಿ.ಆರ್.ರತೀಶ್ ಮತ್ತು ಪಿ.ಜೆ.ಬೈಜು ಪಂದ್ಯವನ್ನು ನಿರ್ವಹಿಸಿದರು. ಕಾಸರಗೋಡು ಜಿಲ್ಲೆಯನ್ನು ಸೋಲಿಸುವ ಮೂಲಕ ತಿರುವನಂತಪುರ ಜಿಲ್ಲೆ ಪಂದ್ಯಾಟದಲ್ಲಿ ಜಯಶಾಲಿಯಾಗಿದೆ.