ಮಧೂರು: ಸಿರಿಬಾಗಿಲು ನೀರಾಳ ಶ್ರೀ ಪಿಲಡ್ಕತ್ತಾಯ ದೇವಸ್ಥಾನದಲ್ಲಿ ಶ್ರೀ ಪಿಲಡ್ಕತ್ತಾಯ ದೈವ, ನಾಗದೇವರ, ಗುಳಿಗ, ರಕ್ಷೋಮೂರ್ತಿ ದೈವಗಳ ಪುನರ್‍ಪ್ರತಿಷ್ಠೆ ಮತ್ತು ಧರ್ಮನೇಮ ಆರಂಭಗೊಂಡಿದ್ದು, ಮೇ 26ರ ವರೆಗೆ ಕ್ಷೇತ್ರತಂತ್ರಿವರ್ಯ ವೇದಮೂರ್ತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
24ರಂದು ಬೆಳಿಗ್ಗೆ 6 ಕ್ಕೆ ಗಣಪತಿ ಹೋಮ, ಅನುಜ್ಞಾ ಕಲಶ, ಕಲಶಪೂಜೆ, 8.05ರಿಂದ 9.02ರ ಮುಹೂರ್ತದಲ್ಲಿ ಶ್ರೀನಾಗದೇವರು, ಗುಳಿಗದೈವ, ರಕ್ಷೋಮೂರ್ತಿಗಳ ಪ್ರತಿಷ್ಠಾ ಕಲಶಾಬಿಷೇಕ. ಆಶ್ಲೇಷಬಲಿ, ತಂಬಿಲ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5.30ಕ್ಕೆ ಶ್ರೀಪಿಲಾಡ್ಕತ್ತಾಯ ದೇವದ ಸನ್ನಿಧಿಯಲ್ಲಿ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ನೂತನ ಮುಖ ಆಯುಧಗಳ ಜಲಾಧಿವಾಸ, 6 ಕ್ಕೆ ಭಜನಾ ಕಾರ್ಯಕ್ರಮ, 7 ರಿಂದ ಕುಣಿತ ಭಜನೆ, ರಾತ್ರಿ 9 ರಿಂದ ಅನ್ನಸಂತರ್ಪಣೆ ನಡೆಯಲಿದೆ.
25ರಂದು ಬೆಳಿಗ್ಗೆ 6 ಕ್ಕೆ ಗಣಪತಿ ಹೋಮ, ಕಲಶ ಪೂಜೆ, 8.02ರಿಂದ 8.55ರ ಮುಹೂರ್ತದಲ್ಲಿ ಶ್ರೀಪಿಲಡ್ಕತ್ತಾಯ ದೈವದ ಪೀಠ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಪ್ರಸಾದ ವಿತರಣೆ, 11 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.
ಎಡನೀರು ಮಠಾೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪಬೆಳಗಿಸಿ ಆಶೀರ್ವಚನ ನೀಡುವರು. ವೇದಮೂರ್ತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣುಮೂರ್ತಿ ಉಪಸ್ಥಿತರಿರುವರು. ಕೆ. ಎನ್. ವೆಂಕಟರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ಸೀತಾರಾಮ ಬಲ್ಲಾಳ, ಕೆ. ಗೋಪಾಲಕೃಷ್ಣ, ವಸಂತ ಪೈ ಬದಿಯಡ್ಕ ಉಪಸ್ಥಿತರಿರುವರು. ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2.30ಕ್ಕೆ ಮಂಗಲ್ಪಾಡಿ ಯಕ್ಷಮೌಕಿಕ ಮಹಿಳಾ ಕೂಟದಿಂದ ಯಕ್ಷಗಾನ ತಾಳಮದ್ದಳೆ, 5 ಕ್ಕೆ ಶ್ರೀ ಪಿಲಡ್ಕತ್ತಾಯ ದೈವದ ಭಂಡಾರ ತೆಗೆಯುವುದು, 6 ಕ್ಕೆ ಭಜನಾ ಕಾರ್ಯಕ್ರಮ, 7 ರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 9 ರಿಂದ ಅನ್ನಸಂತರ್ಪಣೆ ನಡೆಯಲಿದೆ.
26ರಂದು ಬೆಳಿಗ್ಗೆ 0.30ಕ್ಕೆ ಶ್ರೀ ಪಿಲಡ್ಕತ್ತಾಯ ದೈವದ ನೇಮೋತ್ಸವ, ಮಧ್ಯಾಹ್ನ 12.30ಕ್ಕೆ ಗುಳಿಗನ ಕೋಲ, 1 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.