ಸುಳ್ಳು.. ಈ ಜಗತ್ತಿನಲ್ಲಿ ಯಾವ ವ್ಯಕ್ತಿ ಸುಳ್ಳು ಹೇಳೋದಿಲ್ಲ? ಹಾಗೆ ನೋಡೋದಕ್ಕೆ ಹೋದ್ರೆ ಪ್ರತಿಯೊಬ್ಬರೂ ಕೂಡ ಸುಳ್ಳಿನ ಹಿಂದೆ ಬಿದ್ದವರೇ. ಕೆಲವೊಂದು ವಿಚಾರಗಳನ್ನು ಮುಚ್ಚಿ ಹಾಕೋದಕ್ಕಾಗಿ ಸುಳ್ಳು ಹೇಳಬೇಕಾದ ಅನಿವಾರ್ಯತೆ ಮನುಷ್ಯನಿಗೆ ಬಂದೇ ಬರುತ್ತದೆ. ಅದೇ ರೀತಿ ನಿಮ್ಮ ಮನೆಯಲ್ಲಿ ಹದಿ ಹರೆಯದ ಮಕ್ಕಳಿದ್ದರೆ ಅವರು ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರೆ. ಸುಳ್ಳು ಹೇಳೋದು ಅಷ್ಟೇ ಅಲ್ಲ. ಅವರು ನಿಮ್ಮ ಕೈಗೆ ಸುಲಭವಾಗಿ ಸಿಕ್ಕಿ ಬೀಳುತ್ತಾರೆ.
ಹದಿ ಹರೆಯದ ವಯಸ್ಸಿನಲ್ಲಿ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ನಾವು ಕಾಣುತ್ತೇವೆ. ಈ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಿ ಆಗುವ ಗೊಂದಲಗಳ ಬಗ್ಗೆ ಖಂಡಿತ ಅವರಿಗೆ ಗೊತ್ತಾಗೋದೇ ಇಲ್ಲ. ಕೆಲವೊಂದು ಸಲ ಚಿಕ್ಕ-ಪುಟ್ಟ ವಿಚಾರಗಳನ್ನು ಮುಚ್ಚಿಡೋದಕ್ಕೆ ಹೋಗಿ ಅದರಿಂದ ಅವರು ಬಹುದೊಡ್ಡ ತೊಂದರೆಗೆ ಸಿಲುಕಿ ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರು ಏನು ಮಾಡಬೇಕು? ಹದಿ ಹರೆಯದ ಮಕ್ಕಳು ಸುಳ್ಳು ಹೇಳಿದಾಗ ಪೋಷಕರು ಕೈಗೊಳ್ಳಬೇಕಾದ ಕ್ರಮಗಳು ಏನು ಅನ್ನೋದನ್ನು ತಿಳಿಯೋಣ.1. ಏರು ಧ್ವನಿಯಲ್ಲಿ ಮಾತನಾಡಬೇಡಿ
2. ಅವರ ಜಾಗದಲ್ಲಿ ನಿಂತು ಆಲೋಚಿಸಿ
4. ಈ ಮಾತುಗಳನ್ನು ಹೇಳದಿರಿ
ಹೆಚ್ಚಾಗಿ ಅಪ್ಪ- ಅಮ್ಮಾ ಏನು ಹೇಳುತ್ತಾರೋ? ಬೈಯುತ್ತಾರೋ ಗದರುತ್ತಾರೋ ಎಂಬ ಭಯದಿಂದಲೇ ಮಕ್ಕಳು ಸುಳ್ಳು ಹೇಳುತ್ತಾರೆ. ನಿಮ್ಮ ಮಗು ಸುಳ್ಳು ಹೇಳಿ ಸಿಕ್ಕಿ ಬಿದ್ದಾಗ ಈ ಪ್ರಶ್ನೆಗಳನ್ನು ಕೇಳಲೇಬೇಡಿ. ಅವು ಯಾವುದೆಂದರೆ :
* ನನ್ನ ಬಳಿ ಸುಳ್ಳು ಹೇಳಲು ನಿನಗೆಷ್ಟು ದೈರ್ಯ
* ಈ ಸುಳ್ಳಿನಿಂದ ನೀನು ತಪ್ಪಿಸಿಕೊಳ್ಳಬಹುದು ಅಂದುಕೊಂಡಿದ್ದೀಯಾ?
* ನಾನು ನಿನ್ನಿಂದ ನಿರಾಶೆಗೊಂಡಿದ್ದೇನೆ
* ನೀನು ದೊಡ್ಡ ಸುಳ್ಳುಗಾರ
* ನಿನಗೆ ಶಿಕ್ಷೆ ಆಗಲೇಬೇಕು
5. ಮಕ್ಕಳಿಗೆ ಪ್ರಾಮಾಣಿಕತೆಯನ್ನು ಕಲಿಸಲು ಯತ್ನಿಸಿ
ಪ್ರಾಮಾಣಿಕತೆ ಯಾರಿಗೂ ಹುಟ್ಟಿನಿಂದ ಬರೋದಿಲ್ಲ. ನೀವು ಪ್ರಾಮಾಣಿಕತೆಯನ್ನು ಮಕ್ಕಳಿಗೆ ಕಲಿಸದ ಹೊರತಾಗಿ ಅದನ್ನು ಮಕ್ಕಳಿಂದ ನಿರೀಕ್ಷೇ ಮಾಡುವುದು ಕೂಡ ಸರಿಯಲ್ಲ. ಹೀಗಾಗಿ ಚಿಕ್ಕಂದಿನಿಂದಲೇ ಮಕ್ಕಳಿಗೆ ಕೆಲವೊದು ಪ್ರಾಮಾಣಿಕತೆಯ ಪಾಠವನ್ನು ಕಲಿಸಿ.
* ಪ್ರಾಮಾಣಿಕತೆ ಎಷ್ಟು ಮುಖ್ಯವೆಂದು ಅರ್ಥೈಸಿ
* ಸುಳ್ಳು ಹೇಳುವುದರಿಂದ ಯಾವ ರೀತಿ ಋಣಾತ್ಮಕ ಪರಿಣಾಮ ಬೀಳಲಿದೆ ಅನ್ನೋದನ್ನು ತಿಳಿಸಿ
* ಸತ್ಯ ಮಾತನಾಡಿದಾಗ ಅವರನ್ನು ಪ್ರಶಂಸಿಸಿ
* ಸುಳ್ಳಿನ ಹೊರತಾಗಿ ಸಮಸ್ಯೆಗಳನ್ನು ಪರಿಹರಿಸೋದು ಹೇಗೆ ಅನ್ನೋದನ್ನು ತಿಳಿಸಿಕೊಡಿ
* ಉದಾಹರಣೆಗಳನ್ನು ನೀಡಿ
ಸತ್ಯವನ್ನು ಮುಚ್ಚಿ ಹಾಕೋದಕ್ಕೆ ಸುಳ್ಳೊಂದೇ ದಾರಿಯಲ್ಲ. ಅದರ ಹೊರತಾಗಿ ಅನೇಕ ದಾರಿಗಳಿದೆ. ಹೀಗಾಗಿ ಹದಿಹರೆಯದ ಮಕ್ಕಳು ಸುಳ್ಳು ಹೇಳಿದಾಗ ಅವರ ಮೇಲೆ ಗದರೋದನ್ನು ಬಿಟ್ಟು ಅವರಿಗೆ ಯಾವ ರೀತಿ ತಿದ್ದಿ ಬುದ್ಧಿ ಹೇಳಬಹುದು ಅನ್ನೋದ್ರ ಬಗ್ಗೆ ಯೋಚಿಸಿ.
ಮನವಿ:
ಸನ್ಮನಸ್ಸಿನ ಓದುಗರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮಸರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ.
ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:
ಗೂಗಲ್ ಪೇ: 7907952070
ಬ್ಯಾಂಕ್ ವಿವರ:
ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.