ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯರು ಬೀದಿಗೆ ಬಂದು ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. ಪಾಟ್ನಾ ಜಿಲ್ಲೆ ಬಿಹ್ತಾ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ನಡೆದಿರುವ ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಸಹಾಯಕ ಶಿಕ್ಷಕಿಯ ನಡುವೆ ಯಾವುದೋ ವಿಷಯಕ್ಕೆ ಜಗಳ ನಡೆದಿದೆ. ಈ ವೇಳೆ ಪರಸ್ಪರ ವಾಗ್ವಾದ ನಡೆದು ಶಾಲೆಯ ವಿದ್ಯಾರ್ಥಿಗಳ ಮುಂದೆಯೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದರಲ್ಲಿ ಒಬ್ಬ ಶಿಕ್ಷಕಿಯ ತಾಯಿ ಕೂಡಾ ಭಾಗಿಯಾಗಿದ್ದು, ಮತ್ತೊಬ್ಬ ಶಿಕ್ಷಕಿಗೆ ಶೂನಿಂದ ಥಳಿಸಿದ್ದಾರೆ.
ಇಬ್ಬರೂ ಒಬ್ಬರಿಗೊಬ್ಬರು ಕೂದಲನ್ನು ಎಳೆದುಕೊಂಡು ಒದೆಯುವುದು ಮತ್ತು ಬಡಿಯುವುದು ವಿಡಿಯೋದಲ್ಲಿದೆ. ಕೆಲವು ಮಹಿಳೆಯರು ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಇದೇ ವೇಳೆ ಗ್ರಾಮದ ಕೆಲ ಯುವಕರು ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಮನವಿ:
ಸನ್ಮನಸ್ಸಿನ ಓದುಗರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮಸರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ.
ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:
ಗೂಗಲ್ ಪೇ: 7907952070
ಬ್ಯಾಂಕ್ ವಿವರ:
ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.