ಜಾಲೌನ್ (PTI): 'ಶಂಕಿತ ವ್ಯಕ್ತಿಗಳನ್ನು ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದ ಕಾನ್‌ಸ್ಟೆಬಲ್‌ವೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಒರೈ ಪ್ರದೇಶದಲ್ಲಿ ನಡೆದಿದೆ' ಎಂದು ಪೊಲೀಸರು ಹೇಳಿದ್ದಾರೆ.
'ಹೈವೇ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭೇಡ್‌ಜೀತ್ ಸಿಂಗ್ ಅವರು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಶಂಕಿತ ವ್ಯಕ್ತಿಗಳನ್ನು ನಿಲ್ಲಿಸಲು ಮುಂದಾಗಿದ್ದರು. ಆದರೆ ಅವರು ಬೈಕ್ ನಿಲ್ಲಿಸಿಲ್ಲ. ಈ ವೇಳೆ ಭೇಡ್‌ಜೀತ್ ಶಂಕಿತರ ಬೈಕ್ ಬಾಲಿಸಿದ್ದಾರೆ. ಆಗ ಶಂಕಿತರು ಭೇಡ್‌ಜೀತ್‌ಗೆ ಗುಂಡು ಹಾರಿಸಿದ್ದಾರೆ' ಎಂದು ಎಸ್ಪಿ ಇರಾಜ್ ರಾಜ ಅವರು ತಿಳಿಸಿದ್ದಾರೆ.
'ಕೊಲೆಗಾರರಿಗಾಗಿ ಶೋಧ ನಡೆಯುತ್ತಿದೆ' ಎಂದೂ ಅವರು ಮಾಹಿತಿ ನೀಡಿದರು.