ಕಾಸರಗೋಡು: ರಾಜ್ಯ ಸರ್ಕಾರದ ಎರಡನೇ ವಾರ್ಷಿಕೋತ್ಸವ ಅಂಗವಾಗಿ ನ ಅಲಮಿಪಲ್ಲಿ ಬಸ್ ನಿಲ್ದಾಣದಲ್ಲಿ ನಡೆದ 'ಮೈ ಕೇರಳ' ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದಲ್ಲಿ ಕುಟುಂಬಶ್ರೀ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಮಾರಾಟ ನಡೆಸಿದೆ. 2,35,133 ವಹಿವಾಟು ಮಾರುಕಟ್ಟೆ ಮಳಿಗೆಗಳ ಮೂಲಕ ಹಾಗೂ ವಿವಿಧ ಇಲಾಖಾ ಕೂಪನ್‍ಗಳ ಮೂಲಕ 1,98230 ಮೌಲ್ಯದ ಮಾರಾಟವನ್ನು ಫುಡ್ ಕೋರ್ಟ್‍ನಲ್ಲಿ ನಡೆಸಿದೆ. ಫುಡ್ ಕೋರ್ಟ್ ಮೂಲಕ 5,60050 ರೂ. ಲಭಿಸಿದೆ. ಫುಡ್ ಕೋರ್ಟ್ ಮತ್ತು ಇತರೆ ಮಾರುಕಟ್ಟೆ ಮಳಿಗೆಗಳ ಮೂಲಕ ಕುಟುಂಬಶ್ರೀ ಒಟ್ಟು 9,93,413 ರೂ. ವಹಿವಾಟು ನಡೆಸಿದೆ.