ಕಾಸರಗೋಡು: ಬಿಹಾರದ ಪಾಟ್ನಾದಲ್ಲಿ 2022 ಜು. 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಹಾಗೂ ಭಾರತದಲ್ಲಿ ಭಯೋತ್ಪಾದನೆಗೆ ವಿದೇಶಿ ಫಂಡಿಂಗ್ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಏಜನ್ಸಿ(ಎನ್‍ಐಎ)ಮಂಜೇಶ್ವರದ ಒಂದು ಮನೆಗೂ ದಾಳಿ ನಡೆಸಿದ ಬಗ್ಗೆ ಮಾಹಿತಿಯಿದೆ.
ಭಾರತದಲ್ಲಿ ಭಯೋತ್ಪಾದನೆಗೆ ಹವಾಲಾ ಫಂಡಿಂಗ್, ಭಯೋತ್ಪಾದಕ ಕೃತ್ಯಗಳಿಗೆ ವಿದೇಶಗಳಿಂದ ಹವಾಲಾ ಹಣ ಬಳಕೆ ಬಗ್ಗೆ ಲಭಿಸಿದ ಮಾಹಿತಿಯನ್ವಯ ಈ ದಾಳಿ ನಡೆಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಮಂಜೇಶ್ವರ ಕುಂಜತ್ತೂರಿನ ಆಬಿದ್ ಎಂಬಾತನನ್ನು ಎನ್‍ಐಎ ಬಂಧಿಸಿದೆ. ಈ ದಾಳಿಯಲ್ಲಿ ಹಲವು ಡಿಜಿಟಲ್ ಸಾಕ್ಷಿಗಳು ಮತ್ತು ಕೋಟ್ಯಂತರ ರಊ. ವಹಿವಾಟು ನಡೆಸಿರುವ ಬಗ್ಗೆ ದಾಖಲೆ ಅಧಿಕಾರಿಗಳಿಗೆ ಲಭಿಸಿತ್ತು. ಕಾಸರಗೋಡು ಜಿಲ್ಲೆಯಲ್ಲಿ ಎನೈಎ ತೀವ್ರ ನಿಗಾ ಇರಿಸಿದ್ದು, ಯಾವುದೇ ಸಮಯದಲ್ಲೂ ದಾಳಿಗೆ ಸಾಧ್ಯತೆಯಿರುವುದಾಗಿ ಮಾಹಿತಿಯಿದೆ.