HEALTH TIPS

ಕೊಚ್ಚಿಯಲ್ಲಿ ಸಿರಿಗನ್ನಡ ಕಲರವ: 'ಕೊಚ್ಚಿನ್ ಕನ್ನಡ ಸಂಸ್ಕøತಿ ಉತ್ಸವ- ದತ್ತಿನಿಧಿ ಪ್ರಶಸ್ತಿ ಪ್ರದಾನ: ಉತ್ತಮ ಪತ್ರಕರ್ತನಾದವನಿಗೆ ಸಮಾಜದಲ್ಲಿ ಗುರುವಿನ ಸ್ಥಾನ- ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ


           ಎರ್ನಾಕುಳಂ: ಉತ್ತಮ ಪತ್ರಕರ್ತನಾದವನಿಗೆ ಸಮಾಜದಲ್ಲಿ ಗುರುವಿನ ಸ್ಥಾನ ಲಭ್ಯವಿರುವುದಾಗಿ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಸಿ. ಹೊರಟ್ಟಿ ತಿಳಿಸಿದ್ದಾರೆ. ಅವರು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕಾರ್ಯನಿರಯ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ಹಾಗೂ ಕೊಚ್ಚಿನ್‍ಕನ್ನಡ ಸಂಘ ವತಿಯಿಂದ ಎರ್ನಾಕುಳಂ ಟೌನ್ ಹಾಲ್‍ನಲ್ಲಿ ಭಾನುವಾರ ನಡೆದ'ಕೊಚ್ಚಿನ್ ಕನ್ನಡ ಸಂಸ್ಕøತಿ ಉತ್ಸವ-2023', ಸಾಧಕ ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. 

              ಪತ್ರಕರ್ತನಾದವನು ಮೂಲಜ್ಞಾನದ ಜತೆಗೆ ಪ್ರಾಮಾಣಿಕತೆ, ನಿರ್ಲಿಪ್ತ ಮನೋಭಾವ ಹಾಗೂ ಸಮಾಜ ಮುಖಿ ಚಿಂತನೆ ಹೊಂದಿರಬೇಕು. ಆತ್ಮಸ್ಥೈರ್ಯವಿದ್ದಲ್ಲಿ ಸಮಾಜದಲ್ಲಿ ಉತ್ತಮ ಕೆಲಸ ಮಡಲು ಸಾಧ್ಯ ಎಂದು ತಿಳಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿ ಆಶೀರ್ವಚನ ನೀಡಿದರು. ಮಹಮ್ಮದ್‍ಕುಞÂ ಉದಿನೂರ್ ಬರೆದ'ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ'ಎಂಬ ಕೃತಿಯನ್ನು ಕರ್ನಾಟಕ ವಿಧಾನಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಬಿಡುಗಡೆಗೊಳಿಸಿದರು. 

                    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕ ಮತುಗಳನ್ನಾಡಿದರು. ತೃಪ್ಪುಣಿತ್ತುರ ಶಾಸಕ ಕೆ. ಬಾಬು, ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯದರ್ಶಿ ಜಿ.ಸಿ ಲೋಕೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಬ್ದುಲ್‍ರಹಮಾನ್ ಸುಬ್ಬಯ್ಯಕಟ್ಟೆ, ಕೊಚ್ಚಿನ್ ಕನ್ನಡ ಸಂಘದ ಡಿ. ಶ್ರೀನಿವಾಸ ರಾವ್, ಶ್ರೀಕಾಂತ್ ಆನವಟ್ಟಿ, ಪರಿಣತ ರವಿ ಉಪಸ್ಥಿತರಿದ್ದರು. ಸಾಧಕ ಪತ್ರಕರ್ತರಿಗೆ ಬಸವರಾಜ ಹೊರಟ್ಟಿ ದತ್ತಿನಿಧಿ ಪ್ರಶಸ್ತಿಪ್ರದಾನ ಮಾಡಿದರು. ತುಳು ಜಾನಪದ ನೃತ್ಯ, ಬಹುಭಾಷಾ ಕವಿಗೋಷ್ಠಿ, ಕನ್ನಡ-ಮಲಯಾಳ-ತುಳು ಜಾನಪದ ಕಾರ್ಯಕ್ರಮ, ಕೂಚುಪುಡಿ ನೃತ್ಯ, ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬೊಂಬೆಯಾಟ, ನೃತ್ಯ-ಗಾಯನ, ಯೋಗನೃತ್ಯ ಸೇರಿದಂತೆ ಸಾಂಸ್ಕøತಿಕ ವೈವಿಧ್ಯ ನಡೆಯಿತು. 

               ಬೆಳಗ್ಗೆ ಕೊಚ್ಚಿ ಮಹಾನಗರ ಪಾಲಿಕೆ ವಠಾರದಿಂದ ಆರಂಭಗೊಂಡ ಶೋಭಾಯಾತ್ರೆಯನ್ನು ಮಹಾನಗರಪಾಲಿಕೆ ಸದಸ್ಯೆ ಆಶಾದಿಲೀಪ್ ಹಾಗೂ ನಗರಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಕೊಚ್ಚಿ ಮೇಯರ್ ಎಂ. ಅನಿಲ್ ಕುಮಾರ್ ಉದ್ಘಾಟಿಸಿದರು. ಕನ್ನಡ ಸೇರಿದಂತೆ ದ.ಭಾರತದ ವಿವಿಧ ಭಾಷೆಗಳ ಜಂಟಿ ಸಮ್ಮೇಳನ ಕೊಚ್ಚಿಯಲ್ಲಿ ಆಯೋಜಿಸಲು ಶ್ರಮಿಸುವುದಾಗಿ ಎಂ. ಅನಿಲ್‍ಕುಮಾರ್ ತಿಳಿಸಿದ್ದಾರೆ. ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು.  'ಗಡಿನಾಡಿನಲ್ಲಿ ಕನ್ನಡ ಪತ್ರಿಕೋದ್ಯಮ'ವಿಷಯದಲ್ಲಿ ನಡೆದ ವಿಚಾರಸಂಕಿರಣದಲ್ಲಿ ಕಲಬುರ್ಗಿ ಆಕಾಶವಾಣಿ ಪ್ರಭಾರ ನಿಲಯ ನಿರ್ದೇಶಕ ಡಾ. ಸದಾನಂದ ಪೆರ್ಲ ಅಧ್ಯಕ್ಷತೆ ವಹಿಸಿದ್ದರು ಹಿರಿಯ ಪತ್ರಕರ್ತರಾದ ದಯಾಸಾಗರ್ ಚೌಟ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಯು.ಕೆ ಕುಮಾರ್‍ನಾಥ್ ವಿಚಾರ ಮಂಡಿಸಿದರು. ಕೊಚ್ಚಿನ್ ಕನ್ನಡ ಸಂಸ್ಕøತಿ ಉತ್ಸವದ ಸಂಚಲಕ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries