ಲಂಡನ್: ಬ್ರಿಟನ್ ನ ರಾಜ 3 ನೇ ಚಾರ್ಲ್ಸ್ ಪಟ್ಟಾಭಿಷೇಕ ಕಾರ್ಯಕ್ರಮ ಶನಿವಾರ ನಡೆಯಿತು. ಇಂಗ್ಲೇಂಡ್ ನ ಕ್ಯಾಂಟರ್ ಬರಿ ಚರ್ಚ್ ನ ಆರ್ಚ್ ಬಿಷಪ್ ಜಸ್ಟಿನ್ ವೆಲ್ಬಿ ನೇತೃತ್ವದಲ್ಲಿ ಚಾರ್ಲ್ಸ್ ಗೆ ಕಿರೀಟ ಧಾರಣೆ ಮಾಡುವ ಮೂಲಕ ಪಟ್ಟಾಭಿಷೇಕ ಕಾರ್ಯಕ್ರಮ ಸಂಪನ್ನಗೊಂಡಿತು. ಕಿರೀಟ ಧಾರಣೆಯ ಬಳಿಕ ಆರ್ಚ್ ಬಿಷಪ್ ರಾಜನಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
1300 ರಲ್ಲಿ ತಯಾರಾದ ಸಿಂಹಾಸನದ ಮೇಲೆ ಆಸೀನಗೊಳಿಸಿ ಚಾರ್ಲ್ಸ್ ಗೆ ಪಟ್ಟಾಭಿಷೇಕ ನೆರವೇರಿಸಲಾಯಿತು. ಈ ಸಿಂಹಾಸನವನ್ನು ಮೊದಲನೇ ಕಿಂಗ್ ಎಡ್ವರ್ಡ್ ಸ್ಕಾಟ್ಲೆಂಡ್ ಸಾಮ್ರಾಜ್ಯವನ್ನು ವಶಪಡಿಸಿಕೊಂಡ ನೆನಪಿನೊಂದಿಗೆ ಗುರುತಿಸಲಾಗುತ್ತದೆ.