ನವದೆಹಲಿ: ಟಿ.ವಿ, ರೇಡಿಯೊ ಕಾರ್ಯಕ್ರಮಗಳು, ಇನ್‌ಸ್ಟಾಗ್ರಾಂ ರೀಲ್ ಅಥವಾ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಅನಗತ್ಯವಾಗಿ ಮಾನಸಿಕ ಅಥವಾ ದೈಹಿಕವಾಗಿ ಬಳಲುವಂತೆ ಮಾಡಿದಲ್ಲಿ, ಈ ಕಾರ್ಯಕ್ರಮ/ಸ್ಪರ್ಧೆ ಅಯೋಜಕರಿಗೆ ಗರಿಷ್ಠ ಮೂರು ವರ್ಷ ಜೈಲು ವಿಧಿಸಲು ಅವಕಾಶ ಇದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್) ಇದಕ್ಕೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳಿಗೆ ಗುರುವಾರ ಅನುಮೋದನೆ ನೀಡಿದೆ. ಚಲನಚಿತ್ರಗಳು, ಟಿ.ವಿ, ರಿಯಾಲಿಟಿ ಶೋಗಳು, ಒಟಿಟಿ ವೇದಿಕೆಗಳು, ಸುದ್ದಿ, ಸಾಮಾಜಿಕ ಮಾಧ್ಯಮಗಳು, ಕ್ವಿಜ್ ಮತ್ತು ಪ್ರತಿಭಾ ಸ್ಪರ್ಧೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸುವ ಮಕ್ಕಳ ಹಿತರಕ್ಷಣೆಗಾಗಿ ಈ ಮಾರ್ಗಸೂಚಿಗಳನ್ನು ರಚಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮವನ್ನು, ಅದರಲ್ಲಿ ಪಾಲ್ಗೊಳ್ಳುವ ಮಕ್ಕಳ ಅನುಮತಿ ಇಲ್ಲದೇ ಸಿದ್ಧಪಡಿಸುವಂತಿಲ್ಲ. ಈ ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ವೇಳೆ, ಪ್ರತಿ ಮೂರು ಗಂಟೆಗೊಮ್ಮೆ ಮಕ್ಕಳಿಗೆ ವಿಶ್ರಾಂತಿ ನೀಡಬೇಕು. ಆರು ಗಂಟೆಗಳಿಗಿಂತ ಹೆಚ್ಚು ಅವಧಿಗೆ ಅಥವಾ ರಾತ್ರಿ 7ರಿಂದ ಬೆಳಿಗ್ಗೆ 8ರ ವರೆಗಿನ ಅವಧಿಯಲ್ಲಿ ಅವರನ್ನು ಕಾರ್ಯ ನಿರ್ವಹಿಸುವಂತೆ ಮಾಡಬಾರದು ಎಂಬ ಹೊಸ ಮಾರ್ಗಸೂಚಿಗಳಿಗೂ ಅನುಮೋದನೆ ನೀಡಲಾಗಿದೆ.