ಕಾಸರಗೋಡು: ಪಿಣರಾಯಿ ವಿಜಯನ್ ಸರ್ಕಾರದ ಎರಡನೇ ವರ್ಷಾಚರಣೆಯ ಅಂಗವಾಗಿ ಸಚಿವರ ತಾಲೂಕು ಅದಾಲತ್‍ನಲ್ಲಿ ಮೇ 27, 29, 30 ಹಾಗೂ ಜೂನ್ 1 ರಂದು ಬೆಳಿಗ್ಗೆ 10 ರಿಂದ ನಡೆಯಲಿದೆ. ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಪಿ.ಎ ಮುಹಮ್ಮದ್ ರಿಯಾಸ್, ಬಂದರು, ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯಗಳ ಖಾತೆ ಸಚಿವ ಅಹಮದ್ ದೇವರಕೋವಿಲ್ ಅದಾಲತ್‍ನಲ್ಲಿ ಭಾವಹಿಸುವರು. ಸಚಿವರ ತಾಲೂಕು ಮಟ್ಟದ ಅದಾಲತ್ ಮೇ 27 ರಂದು ಬೆಳಗ್ಗೆ 10ಕ್ಕೆ ಕಾಸರಗೋಡಿನ ಪಿಲಿಕುಂಜೆ ನಗರಸಭಾ ಸಭಾಂಗಣದಲ್ಲಿ, 29 ರಂದು ಬೆಳಗ್ಗೆ 10ಕ್ಕೆ ಹೊಸದುರ್ಗ ತಾಲೂಕು ಕಛೇರಿ ಕಾಂಪೌಂಡ್ ಮಿನಿ ಸಿವಿಲ್ ಸ್ಟೇಷನ್ ಹಾಗೂ 30 ರಂದು ಬೆಳಗ್ಗೆ 10ಕ್ಕೆ ಮಂಜೇಶ್ವರ ಲಯನ್ಸ್ ಕ್ಲಬ್ ಉಪ್ಪಳದಲ್ಲಿ ನಡೆಯಲಿದೆ. ಜೂನ್ 1 ರಂದು ವೆಳ್ಳರಿಕುಂಡ್ ತಲೂಕು ಅದಲತ್ ವೆಳ್ಳರಿಕುಂಡ್‍ನ ದರ್ಶನ್ ಆಡಿಟೋರಿಯಂನಲ್ಲಿ ಜರುಗಲಿದೆ.