ಮಾವಿನಹಣ್ಣು ನಂಗೆ ಇಷ್ಟವಿಲ್ಲ ಅಂತ ಹೇಳುವವರನ್ನು ನಾನಂತೂ ಕಂಡಿಲ್ಲ... ಹಾಗೇ ಹೇಳುವರು ತುಂಬಾನೇ ವಿರಳ ಎನ್ನಬಹುದು. ಒಂದು ಮಾವಿನ ಹಣ್ಣನ್ನು ತಿಂದಾಗ ತೃಪ್ತಿಯಾಗಲ್ಲ, ಹೊಟ್ಟೆ ತುಂಬಾ ತಿಂದರೂ ಇನ್ನೂ ಬೇಕೆನಿಸುವುದು, ಅದುವೇ ಮಾವಿನ ಹಣ್ಣಿನ ರುಚಿಯ ವಿಶೇಷತೆ.
ಆದರೆ ತುಂಬಾ ಇಷ್ಟ ಅಂತ ಹೊಟ್ಟೆ ತುಂಬಾ ತಿನ್ನುವ ತಪ್ಪನ್ನು ಮಾಡಬೇಡಿ, ಏಕೆಂದರೆ ಮಾವಿನ ಹಣ್ಣನ್ನು ಅತಿಯಾಗಿ ತಿಂದರೆ ಕೆಲವೊಂದು ಆರೋಗ್ಯ ಸಮಸ್ಯೆ ಉಂಟಾಗುವುದು, ಅತಿಯಾಗಿ ಮಾವಿನಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಸಮಸ್ಯೆಗಳಿವೆ ಎಂದು ನೋಡೋಣ ಬನ್ನಿ:
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಬಹುದು:
ಮಧುಮೇಹ ಸಮಸ್ಯೆ ಇಲ್ಲದಿದ್ದರೂ ತುಂಬಾ ಮಾವಿನಹಣ್ಣು ತಿಂದರೆ ಸಕ್ಕರೆಯಂಶ ಹೆಚ್ಚಾಗಿ ಸುಸ್ತು ಉಂಟಾಗುವುದು, ಆದ್ದರಿಂದ ಮಾವಿನ ಹಣ್ಣು ತುಂಬಾ ತಿನ್ನಬಾರದು, ಅದರಲ್ಲೂ ಮಧುಮೇಹ ಸಮಸ್ಯೆಯಿದ್ದರೆ ಮಾವಿನಹಣ್ಣನ್ನು ಎಷ್ಟು ಮಿತಿಯಲ್ಲಿ ತಿನ್ನುತ್ತೀರೋ ಅಷ್ಟೇ ಒಳ್ಳೆಯದು.
ಲ್ಯಾಟೆಕ್ಸ್ ಅಲರ್ಜಿಯಿದ್ದರೆ ಜಾಗ್ರತೆ: ಕೆಲವರಿಗೆ ಲ್ಯಾಟೆಕ್ಸ್ ಅಲರ್ಜಿ ಸಮಸ್ಯೆ ಇರುತ್ತದೆ. ಅಂಥವರು ಮಾವಿನ ಹಣ್ಣನ್ನು ಅತಿಯಾಗಿ ತಿಂದರೆ ಈ ಸಮಸ್ಯೆ ಹೆಚ್ಚುವುದು. ಇದರಿಂದ ತ್ವಚೆಯಲ್ಲಿ ತುರಿಕೆ, ಗಂಟಲು ಊದುವುದು, ಉಸಿರಾಟದಲ್ಲಿ ತೊಂದರೆ ಉಂಟಾಗುವುದು.
ಬೇಧಿ ಉಂಟಾಗುವುದು ಮಾವಿನ ಹಣ್ಣು ತುಂಬಾ ತಿನ್ನುವುದರಿಂದ ಬೇಧಿ ಸಮಸ್ಯೆ ಉಂಟಾಗುವುದು. ಏಕೆಂದರೆ ಇದರಲ್ಲಿ ನಾರಿನಂಶ ಅಧಿಕವಿರುತ್ತದೆ, ಹೆಚ್ಚಾಗಿ ತಿಂದಾಗ ತುಂಬಾ ಬೇಧಿ ಉಂಟಾಗುವುದು, ಆದ್ದರಿಂದ ಇಷ್ಟ ಅಂತ ತುಂಬಾ ತಿನ್ನಬೇಡಿ.
ಬೇಧಿ ಉಂಟಾಗುವುದು ಮಾವಿನ ಹಣ್ಣು ತುಂಬಾ ತಿನ್ನುವುದರಿಂದ ಬೇಧಿ ಸಮಸ್ಯೆ ಉಂಟಾಗುವುದು. ಏಕೆಂದರೆ ಇದರಲ್ಲಿ ನಾರಿನಂಶ ಅಧಿಕವಿರುತ್ತದೆ, ಹೆಚ್ಚಾಗಿ ತಿಂದಾಗ ತುಂಬಾ ಬೇಧಿ ಉಂಟಾಗುವುದು, ಆದ್ದರಿಂದ ಇಷ್ಟ ಅಂತ ತುಂಬಾ ತಿನ್ನಬೇಡಿ.
ತೂಕ ಹೆಚ್ಚಾಗುವುದು ತುಂಬಾ ಮಾವಿನಹಣ್ಣು ತಿನ್ನುವುದರಿಂದ ಮೈ ತೂಕ ಹೆಚ್ಚಾಗುವುದು. ನೀವು ಫಿಟ್ನೆಸ್ ಕಾಯ್ದುಕೊಳ್ಳಬೇಕು ಎಂದರೆ ದಿನದಲ್ಲಿ 330 ಗ್ರಾಂಕ್ಕಿಂತ ಅಧಿಕ ಸೇವಿಸಬೇಡಿ, ಅಂದರೆ ಒಂದು ಮಾವಿನ ಹಣ್ಣು ತಿಂದರೆ ಸಾಕು.
ಕೃತಕವಾಗಿ ಹಣ್ಣಾಗಿಸಿದ ಮಾವಿನಹಣ್ಣು ಬಳಸಬೇಡಿ
ಮಾರುಕಟ್ಟೆಯಲ್ಲಿ ಮಾವಿನಹಣ್ಣಿನದ್ದೇ ದರ್ಬಾರು, ಅದರಲ್ಲಿ ಯಾವುದು ಕೃತಕವಾಗಿ ಹಣ್ಣಾಗಿಸಿದ್ದು, ಯಾವುದು ನೈಸರ್ಗಿಕವಾಗಿ ಹಣ್ಣಾಗಿದ್ದು ಎಂದು ನಿಮಗೆ ಗೊಂದಲ ಉಂಟಾದರೆ ಅದರ ತೊಟ್ಟು ನೋಡಿ. ಕೃತಕ ಪೌಡರ್ ಬಳಸಿ ಹಣ್ಣಾಗಿಸಿದರೆ ಅದರ ತೊಟ್ಟು ಹಣ್ಣಾಗಿರುವುದಿಲ್ಲ. ಅಲ್ಲದೆ ನೈಸರ್ಗಿಕವಾಗಿ ಹಣ್ಣಾದ ಮಾವಿನಹಣ್ಣು ತಿನ್ನುವಾಗ ಸಿಹಿಯಾಗಿರುತ್ತದೆ, ಆದರೆ ಮಾವಿನಕಾಯಿಗೆ ಪೌಡರ್ ಹಾಕಿ ಹಣ್ಣಾಗಿಸಿದ್ದರೆ ಹಣ್ಣು ತಿನ್ನುವಾಗಲೇ ಗೊತ್ತಾಗುವುದು, ಅಂಥ ಹಣ್ಣನ್ನು ನೀಡಬೇಡಿ. ಅಲ್ಲದೆ ಮಕ್ಕಳಿಗೆ ನೀಡುವಾಗ ಪೌಡರ್ ಹಾಕಿದ ಮಾವಿನಹಣ್ಣು ನೀಡಲೇಬೇಡಿ, ಇದರಿಂದ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗುವುದು.
ಮಾವಿನ ಹಣ್ಣನ್ನು ಯಾವಾಗ ತಿಂದರೆ ಒಳ್ಳೆಯದು?
ಮಾವಿನ ಹಣ್ಣನ್ನು ಯಾವಾಗ ತಿಂದರೆ ಒಳ್ಳೆಯದು?
ನೀವು ಮಾವಿನಹಣ್ಣನ್ನು ಯಾವಾಗ ಬೇಕಾದರೂ ತಿನ್ನಬಹುದು, ಆದರೆ ಮಾವಿನ ಹಣ್ಣನ್ನು ಆಹಾರಕ್ಕಿಂತ ಅರ್ಧ ಗಂಟೆ ಮುಂಚೆ ಅಥವಾ ಊಟವಾಗಿ ಅರ್ಧ ಅಥವಾನೊಂದು ಗಂಟೆ ಕಳೆದ ಮೇಲೆ ತಿಂದರೆ ಒಳ್ಳೆಯದು. ಹೀಗೆ ತಿನ್ನುವುದರಿಂದ ಅದರಲ್ಲಿರುವ ಪೋಷಕಾಂಶಗಳನ್ನು ನಮ್ಮ ಶರೀರ ಹೀರಿಕೊಳ್ಳಲು ಸಹಾಯವಾಗುತ್ತದೆ. ಇನ್ನು ಇದರಿಂದ ಮಿಲ್ಕ್ ಶೇಕ್, ಜ್ಯೂಸ್ ಎಲ್ಲಾ ಮಾಡಿ ಕುಡಿಯಬಹುದು ಆದರೆ ಮಾವಿನಹಣ್ಣನ್ನು ಹಾಗೇ ಸೇವಿಸಿ.
ಮನವಿ: ಸನ್ಮನಸ್ಸಿನ ಓದುಗರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮಸರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ.
ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:
ಗೂಗಲ್ ಪೇ: 7907952070
ಬ್ಯಾಂಕ್ ವಿವರ:
ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.
CANARA BANK
BADIYADKA BRANCH
A/c NUMBER: 0611101029775
IFSC: CNRB0004489