ಆದ್ದರಿಂದ ಅವರು ವಿದ್ಯಾರ್ಥಿಯ ಪ್ರಬಂಧಗಳನ್ನು ChatGPT ಗೆ ಸಲ್ಲಿಸಿದ್ದರು. ಸಲ್ಲಿಸಿದ ಪ್ರಬಂಧಗಳನ್ನು ಸ್ಕ್ಯಾನ್ ಮಾಡಿದ ನಂತರ, ಚಾಟ್ ಜಿಪಿಟಿ, ತನ್ನ ತರಗತಿಯ ಅರ್ಧಕ್ಕಿಂತ ಹೆಚ್ಚು ಪ್ರಬಂಧಗಳನ್ನು ಕೃತಕ ಬುದ್ಧಿಮತ್ತೆಯೇ ಬರೆದಿರುವ ಹೆಚ್ಚಿನ ಸಂಭವನೀಯತೆ ಇದೆ ಎಂದು ಹೇಳಿದೆ.
ಇದಾದ ಬಳಿಕ, ಪ್ರಾಧ್ಯಾಪಕರು ವಿದ್ಯಾರ್ಥಿಗಳ ಡಿಪ್ಲೊಮಾಗಳನ್ನು ತಡೆಹಿಡಿಯಲು ವಿಶ್ವವಿದ್ಯಾಲಯವನ್ನು ಪ್ರೇರೇಪಿಸಿದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ವಿದ್ಯಾರ್ಥಿಗಳು ಚಾಟ್ ಜಿಪಿಟಿಯನ್ನು ಬಳಸಿಲ್ಲವೆಂದು ಸಾಬೀತುಪಡಿಸಲು ತಮ್ಮ ಟೈಮ್‌ಸ್ಟ್ಯಾಂಪ್ ಮಾಡಿದ ಗೂಗಲ್ ಡಾಕ್ಸ್ ಅನ್ನು ತೋರಿಸಿದರು. Al ಚಾಟ್‌ಬಾಟ್ ಸುಳ್ಳು ಹೇಳಿಕೆ ನೀಡಿರುವುದು ಬಹಿರಂಗವಾದಾಗ, ಪ್ರಾಧ್ಯಾಪಕ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದರು. ಆದರೂ, ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಯಿತು.
ಅಧ್ಯಾಪಕರು ವಿದ್ಯಾರ್ಥಿಗಳಿಗೆ ಬರೆದ ಇ-ಮೇಲ್ನಲ್ಲಿ “ನಾನು ನಿಮ್ಮ ಅಸೈನ್ಮೆಂಟ್ಗಳನ್ನು ಚಾಟ್ ಜಿಪಿಟಿ ಖಾತೆಯಲ್ಲಿ ಪೇಸ್ಟ್ ಮಾಡುತ್ತೇನೆ. ಆಗ ಎಲ್ಲಾದರೂ ಚಾಟ್ ಜಿಪಿಟಿ ಕೃತಕ ಬುದ್ಧಿಮತ್ತೆಯೇ ಬರೆದದ್ದು ಎಂದರೆ ನಿಮಗೆ ಸೊನ್ನೆ ಅಂಕಗಳನ್ನು ನೀಡಲಾಗುವುದು” ಎಂದು ಬರೆದಿದ್ದಾರೆ.
ಈ ಅಧ್ಯಾಪಕರ ಹೆಸರು ಮಮ್ ಎಂದಾಗಿದ್ದು ಟೆಕ್ಸಾಸ್‌ನ A&M ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಕಲಿಸುತ್ತಾರೆ. ಅವರು ಈ ಹಿಂದೆ “ನಾನು ಕೃತಕ ಬುದ್ಧಿಮತ್ತೆ ಬರೆದದ್ದನ್ನು ಗ್ರೇಡ್ ಮಾಡುವುದಿಲ್ಲ” ಎಂದು ಟೀಕಿಸಿದ್ದರು. ಅವರು ತಮ್ಮ ವಿದ್ಯಾರ್ಥಿಗಳಿಗಿಂತ AI ಅನ್ನು ಹೆಚ್ಚು ನಂಬಿದ್ದರು ಎಂಬುದು ವಿಪರ್ಯಾಸದ ಸಂಗತಿ.