ತಿರುವನಂತಪುರ: ರಾಜ್ಯದ ಬಹುತೇಕ ಶಾಲೆಗಳ ಮುಂದೆ ಡ್ರಗ್ಸ್ ಗ್ಯಾಂಗ್ ಗಳು ಬೀಡು ಬಿಟ್ಟಿದ್ದು, ಮಕ್ಕಳನ್ನು ಕ್ಯಾರಿಯರ್ ಗಳಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಅತ್ಯಂತ ಸೂಕ್ಷ್ಮವಾಗಿ ಈ ಬಗ್ಗೆ ಗಮನಿಸುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಪೋಷಕರು ಇದನ್ನು ಗಮನಿಸಿದರೆ ಪೋಲೀಸರು ಮತ್ತು ಅಬಕಾರಿ ಅಧಿಕಾರಿಗಳಿಗೆ ತಿಳಿಸಬಹುದು. ಮಕ್ಕಳ ಹಾಜರಾತಿ ತೆಗೆದುಕೊಂಡು ಸಂಜೆಯವರೆಗೂ ಶಾಲೆಯಲ್ಲೇ ಇರುವಂತೆ ಖಾತ್ರಿಪಡಿಸಿಕೊಂಡರೆ ಸಾಕಾಗುವುದಿಲ್ಲ ಎಂದು ತಿಳಿಸಿದ ಸಚಿವರು, ಶಾಲಾ ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದರು.