HEALTH TIPS

ಕೈಯಲ್ಲಿ ಚಿಲ್ಲರೆ ಇಲ್ಲದ ಕಾರಣ ಬಸ್ ಹತ್ತಲು ಹಿಂಜರಿಯಬೇಡಿ: ಖಾಸಗಿ ಬಸ್‍ಗಳಲ್ಲಿ ಇ-ಪೇಮೆಂಟ್ ವ್ಯವಸ್ಥೆ ಶೀಘ್ರ: ಸಂಸದರಿಂದ ಚಾಲನೆ

             ಪಾಲಕ್ಕಾಡ್: ನಿಮ್ಮ ಜೇಬಿನಲ್ಲಿ ಹಣ ಅಥವಾ ಚೇಂಜ್ ಇಲ್ಲದಿದ್ದರೆ ಬಸ್ ಪ್ರಯಾಣಕ್ಕೆ ಹಿಂದೆಮುಂದೆ ನೋಡಬೇಕೆಂದಿಲ್ಲ. ರಾಜ್ಯದಲ್ಲಿ ಖಾಸಗಿ ಬಸ್‍ಗಳಲ್ಲಿ ಇ-ಪೇಮೆಂಟ್ ವ್ಯವಸ್ಥೆ ಸಿದ್ಧಪಡಿಸಲಾಗುತ್ತಿದೆ.

            ಆಲ್ ಕೇರಳ ಬಸ್ ಆಪರೇಟಿವ್ಸ್ ಆರ್ಗನೈಸೇಶನ್ ಪ್ರಯಾಣಿಕರ ಅನುಕೂಲಕ್ಕಾಗಿ ವ್ಯವಸ್ಥೆ ಮಾಡುತ್ತಿದೆ.

           ಕೊಚ್ಚಿಯಲ್ಲಿ ಐಟಿ ಸ್ಟಾರ್ಟ್ ಅಪ್ ಆಗಿರುವ ಗ್ರ್ಯಾಂಡ್ ಲೇಡಿ ಸಹಯೋಗದಲ್ಲಿ ಬಸ್ ಗಳಲ್ಲಿ ಇ-ಪೇಮೆಂಟ್ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಜಿಎಲ್ ಪೋಲ್ ಎಂಬ ಮೊಬೈಲ್ ಆ್ಯಪ್‍ಗೆ ಸಂಪರ್ಕ ಕಲ್ಪಿಸುವ ಇ-ಪೋಸ್ ಯಂತ್ರದ ಮೂಲಕ ಪ್ರಯಾಣಿಕರಿಗೆ ಟಿಕೆಟ್ ನೀಡಲಾಗುತ್ತದೆ.

           ಇ-ಪಾವತಿ ಸೇವೆಗಳಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ವಲ್ರ್ಡ್‍ಲೈನ್ ಈ ಉಪಕ್ರಮಕ್ಕೆ ತಾಂತ್ರಿಕ ಬೆಂಬಲವನ್ನು ನೀಡುತ್ತದೆ. ಈ ಆಪ್ ಮೂಲಕ ಎಟಿಎಂ, ಕ್ರೆಡಿಟ್ ಕಾರ್ಡ್, ಪ್ರಿಪೇಯ್ಡ್ ಕಾರ್ಡ್ ಮತ್ತು ಯುಪಿಐ ಮೂಲಕ ಟಿಕೆಟ್ ಖರೀದಿಸಬಹುದು.

     ಮೊದಲ ಹಂತದಲ್ಲಿ ಪಾಲಕ್ಕಾಡ್ ಜಿಲ್ಲೆಯಲ್ಲಿ 84 ಬಸ್‍ಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುವುದು. ನಂತರ ರಾಜ್ಯಾದ್ಯಂತ ಒಂದು ಸಾವಿರ ಬಸ್‍ಗಳಿಗೆ ಯೋಜನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ. ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಗೋಪಿನಾಥನ್ ಮಾತನಾಡಿ, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಗುರಿ ಹೊಂದಲಾಗಿದೆ.

           ಕಾರ್ಡ್ ವೈ-ಫೈ ವ್ಯವಸ್ಥೆಯನ್ನು ಹೊಂದಿದ್ದರೆ, ಅದನ್ನು ಯಂತ್ರದ ಮೇಲ್ಭಾಗದಲ್ಲಿ ಹಿಡಿದಾಗ ನೀವು ಟಿಕೆಟ್ ಖರೀದಿಸಬಹುದು. ಇದರೊಂದಿಗೆ ಟಿಕೆಟ್ ಗೆ ಚಿಲ್ಲರೆ-ಪಲ್ಲರೆ ಸಮಸ್ಯೆಗಳಿಗೆ ಇತ್ಯರ್ಥ ಕಲ್ಪಿತವಾಗಲಿದೆ. ಇಂದು ಬೆಳಗ್ಗೆ ಹನ್ನೊಂದಕ್ಕೆ ಸಂಸದ ವಿ.ಕೆ.ಶ್ರೀಕಂಠನ್ ಯೋಜನೆಗೆ ಚಾಲನೆ ನೀಡಿರುವರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries