ಕಾಸರಗೋಡು: ಎಡರಂಗ ಸರ್ಕಾರದ ವಿಶಿಷ್ಟ ಯೋಜನೆಗಳ ಮೂಲಕ ರಾಜ್ಯದ ಕರಾವಳಿ ಪ್ರದೇಶವು ಅಭಿವೃದ್ಧಿ ಪಥದತ್ತ ಸಾಗುತ್ತಿರುವುದಾಗಿ ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ಖಾತೆ ಸಚಿವ ಸಜಿ ಚೆರಿಯನ್ ತಿಳಿಸಿದ್ದಾರೆ.
ಅವರು ಮೀನುಗಾರಿಕೆ ಇಲಾಖೆಯು 54 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಕಾಸರಗೋಡು ಜಿಲ್ಲೆಯ ಕಿನಾತ್ತಿಲ್-ತಡಿಯನ್ ಕೋವಲ್‍ರಸ್ತೆ ಸೇರಿದಂತೆ ರಾಜ್ಯದ ವಿವಿಧ ಕರಾವಳಿ ರಸ್ತೆಗಳನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ ಏಳು ವರ್ಷಗಳಿಂದ ಕರಾವಳಿ ಭಾಗದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಉದ್ದೇಶದಿಂದ ಮೀನುಗಾರರನ್ನು ಒಗ್ಗೂಡಿಸಿ ಮಹತ್ವದ ಕೆಲಸ ನಡೆಸಲಾಗಿದೆ. ಇವುಗಳಲ್ಲಿ 2450 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಂಡ ಪುನರ್ಗೆಹಂ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಆಳ ಸಮುದ್ರದ ಮೀನುಗಾರಿಕೆಯಲ್ಲಿಯೂ ಸಹಮೀನುಗಾರರಿಗೆ ವಿಮಾ ಸೌಲಭ್ಯ ಕಲ್ಪಿಸುವುದು, ಆಧುನಿಕ ದೋಣಿಗಳನ್ನು ಒದಗಿಸುವುದು ಸೇರಿದಂತೆ ಮೀನುಗಾರಿಕಾ ವಲಯದಲ್ಲಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು. ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು.
ನೂತನ ರಸ್ತೆಯ ಶಿಲಾಫಲಕವನ್ನು ಶಾಸಕ ಎಂ.ರಾಜಗೋಪಾಲನ್ ಅನಾವರಣಗೊಳಿಸಿದರು. ಪಡನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ವಿ.ಮಹಮ್ಮದ್ ಅಸ್ಲಂ, ಉಪಾಧ್ಯಕ್ಷ ಪಿ.ಬುಶ್ರಾ, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸುಮೇಶ್, ಪಡನ್ನ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ಎಂ.ರಫೀಕ್, ಗ್ರಾಪಂ ಸದಸ್ಯ ಪಿ.ಪಿ.ಕುಞÂಕೃಷ್ಣನ್, ಮಾಜಿ ಸದಸ್ಯ ಕೆ.ವಿ.ಗೋಪಾಲನ್ ಉಪಸ್ಥಿತರಿದ್ದರು. ಪಡನ್ನ ಗ್ರಾ.ಪಂ.ಸದಸ್ಯೆ ವಿ.ಲತಾ ಸ್ವಾಗತಿಸಿದರು. ವಿಜಯಲಕ್ಷ್ಮಿ ವಂದಿಸಿದರು.