ಕಾಸರಗೋಡು: ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ ಹೆಸರಿನಲ್ಲಿ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿರುವ ಅಧಿಕಾರಿಗಳ ಕ್ರಮವನ್ನು ತಡೆಯುವಂತೆ ಹಾಗೂ ವ್ಯಾಪಾರಿ ಸಂಸ್ಥೆಗಳ ಮೇಲೆ ದಾಳಿ ನಿಲ್ಲಿಸುವಂತೆ ಆಗ್ರಹಿಸಿ ಕೇರಳ ಜಿಲ್ಲಾ ವ್ಯಾಪಾರಿ ಮತ್ತು ವ್ಯವಸಾಯಿ ಸಮಿತಿಯು ಜಿಲ್ಲಾಧಿಕಾರಿ ಕಚೇರಿ ಕಡೆಗೆ ಮೆರವಣಿಗೆ ಮತ್ತು ಧರಣಿ ನಡೆಸಿತು.
ಕೇರಳ ವ್ಯಾಪಾರಿ ವ್ಯವಸಾಯಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ವ್ಯಾಪಾರಿ ವ್ಯವಸಾಯಿ ಸಮಿತಿ ಕಾರ್ಯದರ್ಶಿ ಟಿ.ವಿ ಬಾಲನ್ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಕೆ.ಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಎಚ್.ಮಹಮ್ಮದ್, ಸತ್ಯನ್ ಪಡನ್ನಕ್ಕಾಡ್, ಅನಿತಾ ಕಾಞಂಗಾಡ್, ಮಾಧವನ್ ತ್ರಿಕರಿಪುರ, ಟಿ.ಕೆ.ಮನೋಜ್, ರಾಜನ್ ಮಡಿಕೈ, ರಿಯಾಸ್ ಚೌಕಿ, ಶಬರೀನಾಥ್, ಶಶಿಧರನ್ ಉದುಮ, ಸಿನು ಕುರಿಯಾಕೋಸ್ ಉಪಸ್ಥಿತರಿದ್ದರು. ಜಿಲ್ಲಾ ಜಂಟಿ ಕಾರ್ಯದರ್ಶಿ ಇ.ರಾಘವನ್ ಸ್ವಾಗತಿಸಿದರು. ಕಾಸರಗೋಡು ಏರಿಯಾ ಕಾರ್ಯದರ್ಶಿ ಬಿ. ಪ್ರಕಾಶನ್ ವಂದಿಸಿದರು.