ಉಪ್ಪಳ: ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದ ಸಿಬಿಎಸ್‍ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಸತತ 18ನೇ ಬಾರಿಗೆ ಶೇ. ನೂರು ಫಲಿತಾಂಶ ದಾಖಲಿಸಿಕೊಂಡಿದೆ. ಪರೀಕ್ಷೆ ಬರೆದ 79 ವಿದ್ಯಾರ್ಥಿಗಳಲ್ಲಿ 51 ಮಂದಿಗೆ ಡಿಸ್ಟಿಂಕ್ಷನ್, 26 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿಉತ್ತೀರ್ಣರಾಗಿದ್ದಾರೆ. 97 ಶೇ ಅಂಕದೊಂದಿಗೆ ಎ ಜಿ ಚಿಕ್ಕೇಗೌಡ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಶೇ. 95.2 ಅಂಕದೊಂದಿಗೆ ಕುಮಾರಿ ಭಾಗ್ಯಶ್ರೀ ಜಿ ಪಿ, ಹಾಗು ಗಣೇಶ ಕುಮಾರ್ ಪಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. 20 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕವನ್ನು ಗಳಿಸಿರುತ್ತಾರೆ.