ಕಾಸರಗೋಡು: ಕಾಞಂಗಾಡ್ ಮಾತಾ ಅಮೃತಾನಂದಮಯೀ ಮಠದ ಯುವಜನ ವಿಭಾಗ'ಆಯುಧ್'ನೇತೃತ್ವದಲ್ಲಿ ಯುವಕರಿಗಾಗಿ 2 ದಿನಗಳ ನಾಯಕತ್ವ ತರಬೇತಿ ಶಿಬಿರ ಕಾಞಂಗಾಡಿನ ಅಮೃತಾ ವಿದ್ಯಾಲಯದಲ್ಲಿ ಜರುಗಿತು.
ಉತ್ತರ ಕೇರಳದ ಮಾತಾ ಅಮೃತಾನಂದಮಯೀ ಮಠಗಳ ಅಧ್ಯಕ್ಷ ಸ್ವಾಮಿ ಅಮೃತಕೃಪಾನಂದಪುರಿ, ಸ್ವಾಮಿ ಅಭೇದಾಮೃತಾನಂದಪುರಿ ಶಿಬಿರದ ನೇತೃತ್ವ ವಹಿಸಿದ್ದರು. ಸ್ವಾಮಿ ಅಭೇದಾಮೃತಾನಂದಪುರಿ, ಸ್ವಾಮಿ ವಿವೇಕಾಮೃತಾನಂದಪುರಿ, ಸ್ವಾಮಿನಿ ಅತುಲ್ಯಮೃತ ಪ್ರಾಣ, ಬ್ರಹ್ಮಚಾರಿ ಸುಮೇಧಾಮೃತ ಚೈತನ್ಯ ಮತ್ತು ಬ್ರಹ್ಮಚಾರಿ ವೇದವೇದ್ಯಾಮೃತ ಚೈತನ್ಯ ಶಿಬಿರ ಉದ್ಘಾಟಿಸಿದರು.
ಶಂಕು ಟಿ ದಾಸ್, ವಿದ್ಯಾಸಾಗರ್ ಗುರುಮೂರ್ತಿ, ಗ್ರಾ.ಪಂ.ಉಪಾಧ್ಯಕ್ಷ ಸೈಜನ್ ಕುಮಾರ್, ಸಿ.ಎಂ.ಶಾಜಿ, ರೆಜಿನ್ ಪಿ, ಗಾಯತ್ರಿ ನಾರಾಯಣನ್ ಮತ್ತಿತರರು ವಿವಿಧ ವಿಷಯಗಳ ಚರ್ಚೆಯಲ್ಲಿ ಭಾಗವಹಿಸಿದ್ದರು. ಆಯುಧ್ ಸಂಯೋಜಕರಾದ ಬ್ರಹ್ಮಚಾರಿ ವಿವೇಕ್, ಮುರಳಿ ಕೃಷ್ಣನ್ ಮತ್ತಿತರರು ನಿರೂಪಿಸಿದರು.