ಮಲಪ್ಪುರಂ: ಅತ್ಯಂತ ಕ್ರೂರ ಕೃತ್ಯವೊಂದರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಕ್ಕರ ಬಳಿ ವ್ಯಕ್ತಿಯೊಬ್ಬ ನಾಯಿಯನ್ನು ಬೈಕ್‌ನ ಹಿಂದೆ ಕಟ್ಟಿ ಹಾಕಿ ರಸ್ತೆಯಲ್ಲಿ ಏಳೆದಾಡಿದ ಘಟನೆ ನಡೆದಿದೆ.
ಮಲಪ್ಪುರಂ: ಅತ್ಯಂತ ಕ್ರೂರ ಕೃತ್ಯವೊಂದರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಕ್ಕರ ಬಳಿ ವ್ಯಕ್ತಿಯೊಬ್ಬ ನಾಯಿಯನ್ನು ಬೈಕ್‌ನ ಹಿಂದೆ ಕಟ್ಟಿ ಹಾಕಿ ರಸ್ತೆಯಲ್ಲಿ ಏಳೆದಾಡಿದ ಘಟನೆ ನಡೆದಿದೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ಘಟನೆಯು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಗುರಿಯಾಗಿದ್ದು, ಕೇರಳದಲ್ಲಿ ಪ್ರಾಣಿಗಳ ವಿರುದ್ಧ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದರ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. ಅಲ್ಲದೆ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ. ಈ ವಿಡಿಯೊ ಆಧಾರದಲ್ಲಿ ಕೇರಳ ಪೊಲೀಸರು ವಿಚಾರಣೆ ಪ್ರಾರಂಭಿಸಿದ್ದಾರೆ.