ನವದೆಹಲಿ: ಭಾರತೀಯ ರೈಲ್ವೆ ಇತ್ತೀಚೆಗೆ ಪರಿಚಯಿಸಿದ ವಂದೇ ಭಾರತ್ ರೈಲುಗಳಲ್ಲಿ ಸಾಮಾನ್ಯ ಮತ್ತು ಎಕ್ಸಿಕ್ಯುಟಿವ್ ಸೀಟ್ಗಳನ್ನು ಮಾತ್ರ ಹೊಂದಿವೆ.
ಇದುವರೆಗೂ ಸ್ಲೀಪರ್ ಬರ್ತ್‌ಗಳಿಲ್ಲ. ಆದರೆ ಪ್ರಯಾಣಿಕರಿಂದ ವಂದೇ ಭಾರತ್ ಟ್ರೇನ್ನಲ್ಲೂ ಸ್ಲೀಪರ್ ಬರ್ತ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡುತ್ತಿರುವುದಿರಂದ ರೈಲ್ವೆ ಇಲಾಖೆ ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.
ಮುಂದಿನ ಫೆಬ್ರವರಿ-ಮಾರ್ಚ್ ವೇಳೆಗೆ 3 ಮಾದರಿಯ ವಂದೇ ಭಾರತ್ ರೈಲುಗಳನ್ನು ತರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ವಂದೇ ಮೆಟ್ರೋ, ವಂದೇ ಚೇರ್ ಕಾರ್, ವಂದೇ ಸ್ಲೀಪರ್ ರೈಲುಗಳು ಜಾರಿಗೆ ಬರಲಿವೆ.
100 ಕಿ.ಮೀ.ವರೆಗಿನ ಪ್ರಯಾಣಕ್ಕೆ ವಂದೇ ಮೆಟ್ರೋ ರೈಲು, 100ರಿಂದ 550 ಕಿ.ಮೀ.ವರೆಗಿನ ಪ್ರಯಾಣಕ್ಕೆ ವಂದೇ ಚೇರ್ ಕಾರ್ ರೈಲು, 550 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ ವಂದೇ ಸ್ಲೀಪರ್ ರೈಲುಗಳು ಬರಲಿವೆ.
ಈ ಮೂರು ಬಗೆಯ ರೈಲುಗಳು ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ವೇಳೆಗೆ ಸಿದ್ಧವಾಗಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಹೇಳಿದೆ. ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಕೇಂದ್ರ ಸರ್ಕಾರವು ಹೆಚ್ಚಿನ ಸಂಖ್ಯೆಯಲ್ಲಿ ವಂದೇ ಭಾರತ್ ರೈಲುಗಳನ್ನು ತಯಾರಿಸುತ್ತಿದೆ. ಪ್ರಸ್ತುತ ಪ್ರತಿ 8 ಅಥವಾ 9 ದಿನಗಳಿಗೊಮ್ಮೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಸಿದ್ಧಪಡಿಸಲಾಗುತ್ತಿದೆ. ಈ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಎರಡು ಕಾರ್ಖಾನೆಗಳ ನಿರ್ಮಾಣ ನಡೆಯುತ್ತಿದೆ.
ಈ ರೈಲುಗಳ ವೇಗವನ್ನು ಹೆಚ್ಚಿಸಲು ಕೇಂದ್ರವೂ ಪ್ರಯತ್ನಿಸುತ್ತಿದೆ. ಅದು ಆಗಬೇಕಾದರೆ ಈಗಿರುವ ಹಳಿಗಳ ಬದಲಿಗೆ ಹೊಸ ಹಳಿಗಳನ್ನು ಅಳವಡಿಸಬೇಕು. ಈಗಿರುವ ರೈಲು ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗವನ್ನು ತಡೆದುಕೊಳ್ಳಬಲ್ಲರು. ಪ್ರತಿ ಗಂಟೆಗೆ 160 ಕಿ.ಮೀ ವೇಗವನ್ನು ತಡೆದುಕೊಳ್ಳುವಂತೆ ಹೊಸ ಟ್ರ್ಯಾಕ್‌ಗಳನ್ನು ಮಾಡಲಾಗುತ್ತಿದೆ. ಇನ್ನೂ ಮೂರು ವರ್ಷಗಳ ನಂತರ ಅವು ಲಭ್ಯವಾಗಲಿವೆ.
ಶೀಘ್ರದಲ್ಲೇ ಪ್ರಯಾಣಿಕರಿಗೆ ಈ ರೈಲುಗಳಲ್ಲಿ 4G ಮತ್ತು 5G ಸೇವೆ ಸಿಗುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಉತ್ತರಾಖಂಡದ ಡೆಹ್ರಾಡೂನ್‌ನಿಂದ ದೆಹಲಿಯ ಆನಂದ್ ವಿಹಾರ್‌ಗೆ ಸಂಚರಿಸುವ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ನಂತರ ಪಿಟಿಐ ಜೊತೆ ಮಾತನಾಡಿದ ಅವರು, ಈ ವರ್ಷದ ಜೂನ್ ಮಧ್ಯದ ವೇಳೆಗೆ ಎಲ್ಲಾ ರಾಜ್ಯಗಳಲ್ಲಿ ವಂದೇ ಭಾರತ್ ರೈಲು ಲಭ್ಯವಾಗಲಿದೆ ಎಂದು ಹೇಳಿದರು.
ಮನವಿ:ಸನ್ಮನಸ್ಸಿನ ಓದುಗರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮಸರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ.
ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:
ಗೂಗಲ್ ಪೇ: 7907952070
ಬ್ಯಾಂಕ್ ವಿವರ:
ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.