ಕಾಸರಗೋಡು : ಜಿಲ್ಲೆಯ ಶಾಲಾ ಬಸ್ ಚಾಲಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಮೇ 27ರಿಮದ ನಡೆಯಲಿದೆ. ಮೇ 27ರಂದು ಬೆಳಗ್ಗೆ 10ಕ್ಕೆ ಯುಬಿಎಂ ಚರ್ಚ್, ಎಲ್‍ಪಿಎಸ್, ಟಿಬಿ ರಸ್ತೆ, ಹೊಸದುರ್ಗ, 29ರಂದು ಬೆಳಗ್ಗೆ 10ಕ್ಕೆ ಸದೀಯ ಇಂಗ್ಲಿಷ್ ಶಾಲೆ ಕಾಸರಗೋಡು, ಮಧ್ಯಾಹ್ನ 2ಗಮಟೆಗೆ ಸಬ್ ಆರ್‍ಟಿಓ ಕಚೇರಿ ವೆಲ್ಳರಿಕುಂಡು, 30ರಂದು ಬೆಳಗ್ಗೆ 10ಕ್ಕೆ ಅಮೃತ ವಿದ್ಯಾಪೀಠ, ಕಲ್ಯಾಣ್‍ರೋಡ್, ಕಾಞಂಗಾಡು, 31 ರಂದು ಬೆಳಿಗ್ಗೆ 9ಕ್ಕೆ ಎಜಿಐ ಆಂಗ್ಲ ಮಾಧ್ಯಮ ಶಾಲೆ ಉಪ್ಪಳ, ಬೆಳಗ್ಗೆ 10ಕ್ಕೆ ಕಸರಗೊಡು ಚೆಮ್ನಾಡ್ ಜಮಾ ಅತ್ ಸ್ಕೂಲ್‍ನಲ್ಲಿ ತರಬೆತಿ ನಡೆಯುವುದು. ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಅಪಘಾತ ಮುಕ್ತಗೊಳಿಸುವ ಅಂಗವಾಗಿ ಎಲ್ಲಾ ಶಾಲಾ ಬಸ್ ಚಾಲಕರು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಕಡ್ಡಾಯವಗಿ ಭಾಗವಹಿಸಬೇಕು ಎಂದು ಆರ್‍ಟಿಒ ಎಂ.ಟಿ.ಡೇವಿಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.