ಕಾಸರಗೋಡು: ಎಲ್ಲಾ ಶಾಲೆಗಳಲ್ಲಿ ಶಾಲಾ ಸಂರಕ್ಷಣಾ ಸಮಿತಿಗಳನ್ನು ರಚಿಸಿ ಶಿಕ್ಷಣ ಸಂಸ್ಥೆಗಳ ಆವರಣವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ನಿರಂತರ ನಿಗಾ ವ್ಯವಸ್ಥೆ ಸ್ಥಾಪಿಸಲು ಜಿಲ್ಲಾ ಉನ್ನತ ಮಟ್ಟದ ಸಭೆ ನಿರ್ಧರಿಸಿದೆ.
ಮೂರು ತಿಂಗಳಲ್ಲಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮಾದಕಮುಕ್ತ ಶಾಲೆಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಒಗ್ಗೂಡಿ ಶ್ರಮಿಸಬೇಕು ಎಂದು ಜಿಲ್ಲಾ ಹಣಕಾಸು ಅಧಿಕಾರಿ ಶಿವಪ್ರಕಾಶನ ನಾಯರ್ ಸಲಹೆ ನೀಡಿದರು. ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಜಿಲ್ಲೆಯಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಂಬಾಕು ನಿಯಂತ್ರಣ ಮಂಡಳಿ ಜಿಲ್ಲಾ ಅಧಿಕಾರಿ ಡಾ.ಪ್ರಸಾದ್ ಥಾಮಸ್ ಮಾಹಿತಿ ನೀಡಿದರು. ಜಿಲ್ಲಾ ಕೇಂದ್ರದಲ್ಲಿ ಫ್ಲ್ಯಾಷ್ ಮಾಬ್ ಮತ್ತು ವಿಚಾರ ಸಂಕಿರಣ ಆಯೋಜಿಸುವುದು, ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಸಮಿತಿಯನ್ನು ಬಲಪಡಿಸುವುದು, ವಿವಿಧ ಇಲಾಖೆಗಳು ಸೇರಿದಂತೆ ಜಿಲ್ಲಾ ಮತ್ತು ಪಂಚಾಯಿತಿ ಮಟ್ಟದ ಸ್ಕ್ವಾಡ್‍ಗಳನ್ನು ರಚಿಸುವುದು, ಶಿಕ್ಷಣತಜ್ಞರಿಗೆ ಹಾಗೂ ತಂಬಾಕು ರೈತರು ಮತ್ತು ಕಾರ್ಮಿಕರಿಗೆ ವಿಚಾರ ಸಂಕಿರಣ ಮತ್ತು ತರಬೇತಿಗಳನ್ನು ನಡೆಸಲಾಗುವುದು.
ಜಿಲ್ಲಾ ಹಣಕಾಸು ಅಧಿಕಾರಿ ಶಿವಪ್ರಕಾಶನ ನಾಯರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳನ್ನು ಪ್ರತಿನಿಧಿಸಿದ ಎ.ಪ್ರೇಮಾ (ಸ್ಥಳೀಯಾಡಳಿತ), ಪಿ.ಪ್ರಮೋದ್ (ಪೆÇಲೀಸ್), ಬಿ.ಸುರೇಂದ್ರನ್ (ಶಿಕ್ಷಣ), ಹಾರಿಸ್‍ಬಿನ್ ಮಹಮ್ಮದ್ (ಕಾರ್ಮಿಕ), ಕೆ.ಎಸ್.ಪ್ರಶೋಬ್ (ಅಬಕಾರಿ) ಮತ್ತು ಪಿ.ಕೆ.ತಿರುಮಲೇಶ ಮುಂತಾದವರು ಉಪಸ್ಥಿತರಿದ್ದರು.