ಲಖನೌ: ಲಖನೌ: ಜ್ಞಾನವಾಪಿ ಮಸೀದಿಯ ಸಂಪೂರ್ಣ ಭೂ ವಿಸ್ತೀರ್ಣವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಸರ್ವೆಗೆ ಒಳಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಾರಾಣಸಿ ಕೋರ್ಟ್ ವಿಚಾರಣೆಗಾಗಿ ಅಂಗೀಕರಿಸಿದೆ.
ಲಖನೌ: ಲಖನೌ: ಜ್ಞಾನವಾಪಿ ಮಸೀದಿಯ ಸಂಪೂರ್ಣ ಭೂ ವಿಸ್ತೀರ್ಣವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಸರ್ವೆಗೆ ಒಳಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಾರಾಣಸಿ ಕೋರ್ಟ್ ವಿಚಾರಣೆಗಾಗಿ ಅಂಗೀಕರಿಸಿದೆ.
ಮಸೀದಿಯ ಆವರಣದಲ್ಲಿ ಕಳೆದ ವರ್ಷ ವಿಡಿಯೊಗ್ರಫಿ ಸರ್ವೆ ನಡೆಸುವ ಸಂದರ್ಭದಲ್ಲಿ ಕಂಡುಬಂದಿದ್ದ 'ಶಿವಲಿಂಗ' ಕುರಿತಂತೆ 'ವೈಜ್ಞಾನಿಕ ಸರ್ವೆ'ಯನ್ನು ನಡೆಸಬೇಕು ಎಂದು ಇತ್ತೀಚೆಗಷ್ಟೇ ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು.
ಪೂರ್ಣ ಸರ್ವೆ ಕೋರಿದ್ದ ಅರ್ಜಿ ಪರಿಗಣಿಸಿದ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು, ಈ ಕುರಿತು ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸದ್ಯ ಮಸೀದಿ ಉಸ್ತುವಾರಿ ಹೊಂದಿರುವ ಅಂಜುಮನ್ ಇಂತೆಜಮೀಯ ಸಮಿತಿಗೆ ಸೂಚಿಸಿತು.
ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿ ಕೊಂಡಂತಿದೆ. 17ನೇ ಶತಮಾನದಲ್ಲಿ ಹಿಂದೂ ದೇಗುಲ ನೆಲಸಮ ಗೊಳಿಸಿ ಮಸೀದಿ ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿರುವ ಆರು ಅರ್ಜಿದಾರರು ಪೂರ್ಣ ಸರ್ವೆ ಕೋರಿ ಅರ್ಜಿ ಸಲ್ಲಿಸಿದ್ದರು.
ಮಸೀದಿಯ ಕೆಳಗೆ ಏನು ಹುದುಗಿದೆ ಎಂದು ಗೊತ್ತಾಗಬೇಕಿದೆ. ದೇಗುಲವನ್ನು ನೆಲಸಮಗೊಳಿಸಿ ಮೂರು ಗೋಪುರವನ್ನು ನಿರ್ಮಿಸಿದ್ದು ಯಾವಾಗ ಎಂಬ ಪ್ರಶ್ನೆಗೂ ಉತ್ತರಬೇಕಾಗಿದೆ ಎಂದು ಅರ್ಜಿದಾರರ ಪರ ವಕೀಲ ವಿಷ್ಣುಶಂಕರ್ ಜೈನ್ ಹೇಳಿದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, 'ಈಗ ಈ ಪ್ರಕರಣದ ವಿಚಾರಣೆಯೂ ರಾಮಮಂದಿರ ಪ್ರಕರಣದ ವಿಚಾರಣೆಯಂತೆಯೇ ನಡೆಯಲಿದೆ' ಎಂದೂ ತಿಳಿಸಿದರು.